ನವದೆಹಲಿ: ಲಸಿಕೆ ಮೈತ್ರಿ GAVI ಯೊಂದಿಗಿನ ಒಪ್ಪಂದದ ಪ್ರಕಾರ, ಭಾರತವು 4.5 ಕೋಟಿ ಡೋಸ್ ಮೇಡ್ ಇನ್ ಇಂಡಿಯಾ ಕೋವಿಡ್ -19 ಲಸಿಕೆಗಳನ್ನು ಪಾಕಿಸ್ಥಾನಕ್ಕೆ ಕಳುಹಿಸಿಕೊಡಲಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
GAVI ಎನ್ನುವುದು ಸಾರ್ವಜನಿಕ-ಖಾಸಗಿ ಜಾಗತಿಕ ಆರೋಗ್ಯ ಸಹಭಾಗಿತ್ವವಾಗಿದ್ದು, ರೋಗನಿರೋಧಕತೆಯ ಪ್ರವೇಶವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಈ ವರ್ಷದ ಜೂನ್ ವೇಳೆಗೆ 1.6 ಕೋಟಿ ಡೋಸ್ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
“ಪಾಕಿಸ್ಥಾನಕ್ಕೆ ಯಾವುದೇ ಮಾನವೀಯ ಸಹಾಯ ನೀಡಲು ಭಾರತ ಮುಕ್ತವಾಗಿದೆ. ಹೆಚ್ಚಿನ ಲಸಿಕೆಗಳನ್ನು ನೇರವಾಗಿ ನೀಡಲಾಗುವುದು. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು”ಎಂದು ಗುರುತಿಸಲು ಇಚ್ಛಿಸದ ಅಧಿಕಾರಿಗಳು ಹೇಳಿದ್ದಾರೆ.
ಪಾಕಿಸ್ಥಾನದ ಔಷಧ ನಿಯಂತ್ರಕನಾದ ಡ್ರಗ್ ರೆಗ್ಯುಲೇಟರಿ ಅಥಾರಿಟಿ ಆಫ್ ಪಾಕಿಸ್ಥಾನ್, ಈ ವರ್ಷದ ಜನವರಿಯಲ್ಲಿ ತುರ್ತು ಬಳಕೆಗಾಗಿ ಆಕ್ಸ್ಫರ್ಡ್-ಅಸ್ಟ್ರಾಜೆನೆಕಾದ ಕೋವಿಡ್ -19 ಲಸಿಕೆಯನ್ನು ಅನುಮೋದಿಸಿತ್ತು. ಅಲ್ಲಿ ಅನುಮೋದನೆ ಪಡೆದ ಮೊದಲ ಕೋವಿಡ್ -19 ಲಸಿಕೆ ಇದಾಗಿದೆ.
ಭಾರತ ಮತ್ತು ಪಾಕಿಸ್ಥಾನದ ನಡುವಿನ ದ್ವಿಪಕ್ಷೀಯ ವ್ಯಾಪಾರವು 2019ರಿಂದ ಕುಸಿತ ಕಂಡಿದೆ, ಆದರೂ ಜೀವ ಉಳಿಸುವ ಔಷಧಿಗಳ ಪೂರೈಕೆಯಿಂದ ವಿನಾಯಿತಿ ನೀಡಲಾಗಿದೆ ಮತ್ತು ದ್ವಿಪಕ್ಷೀಯ ಮಾರ್ಗದ ಮೂಲಕ ಇದನ್ನು ಮಾಡಬಹುದಾಗಿದೆ.
ಪಾಕಿಸ್ಥಾನ ತನ್ನ 220 ಮಿಲಿಯನ್ ಜನರಲ್ಲಿ ಕನಿಷ್ಠ 70 ಪ್ರತಿಶತದಷ್ಟು ಜನರಿಗೆ ಕೋವಿಡ್ ವಿರುದ್ಧ ಉಚಿತವಾಗಿ ಚುಚ್ಚುಮದ್ದು ನೀಡಲು ಯೋಜಿಸಿದೆ. ಆ ರಾಷ್ಟ್ರಕ್ಕೆ 5,00,000 ಡೋಸ್ಗಳನ್ನು ದಾನ ಮಾಡುವುದಾಗಿ ಚೀನಾ ವಾಗ್ದಾನ ಮಾಡಿದೆ.
ಮುಂಚೂಣಿ ಕಾರ್ಮಿಕರು ಮತ್ತು ಹಿರಿಯ ನಾಗರಿಕರು ಸೇರಿದಂತೆ ಒಟ್ಟು 27.5 ಮಿಲಿಯನ್ ಜನರಿಗೆ ಪಾಕಿಸ್ಥಾನದಲ್ಲಿ ಕೋವಿಡ್ -19 ವಿರುದ್ಧ ಲಸಿಕೆ ನೀಡಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಸೇವೆಗಳ ನಿಯಮಗಳು ಮತ್ತು ಸಮನ್ವಯ ಸಚಿವಾಲಯದ ಫೆಡರಲ್ ಕಾರ್ಯದರ್ಶಿ ಅಮೀರ್ ಅಶ್ರಫ್ ಖವಾಜಾ ಅವರು ತಿಳಿಸಿದ್ದಾರೆ.
ಈ ನಡುವೆ, ಭಾರತ ಇದುವರೆಗೆ 65 ದೇಶಗಳಿಗೆ ಲಸಿಕೆಗಳನ್ನು ಪೂರೈಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.