ನವದೆಹಲಿ: ಸ್ವಿಟ್ಜರ್ಲ್ಯಾಂಡ್ನಲ್ಲಿ ನಡೆದ ಜನಮತ ಸಂಗ್ರಹದಲ್ಲಿ, ಬಹುಪಾಲು ಜನರು ನಿಕಾಬ್ ಮತ್ತು ಬುರ್ಖಾ ಸೇರಿದಂತೆ ಪೂರ್ಣ ಮುಖ ಮುಚ್ಚುವ ಹೊದಿಕೆಗಳನ್ನು ಬಹುತೇಕ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸುವ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಜನಾಭಿಪ್ರಾಯದ ಫಲಿತಾಂಶದ ಪರಿಣಾಮವಾಗಿ, ಬೀದಿಗಳಲ್ಲಿ, ಸಾರ್ವಜನಿಕ ಕಚೇರಿಗಳಲ್ಲಿ, ಸಾರ್ವಜನಿಕ ಸಾರಿಗೆಯಲ್ಲಿ, ರೆಸ್ಟೋರೆಂಟ್ಗಳಲ್ಲಿ, ಅಂಗಡಿಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸೇರಿದಂತೆ ಸಾರ್ವಜನಿಕವಾಗಿ ಪ್ರವೇಶಿಸಬಹುದಾದ ಎಲ್ಲ ಸ್ಥಳಗಳಲ್ಲಿ ಮುಖ ಮುಚ್ಚುವ ಹೊದಿಕೆಗಳನ್ನು ಅಲ್ಲಿ ನಿಷೇಧಿಸಲಾಗುತ್ತಿದೆ.
ಆದರೂ, ಮುಖ ಹೊದಿಕೆಗಳನ್ನು ಪೂಜಾ ಸ್ಥಳಗಳಲ್ಲಿ ಮತ್ತು ಇತರ ಪವಿತ್ರ ಸ್ಥಳಗಳಲ್ಲಿ ಮತ್ತು ಆರೋಗ್ಯ ಮತ್ತು ಸುರಕ್ಷತೆಯ ಕಾರಣಗಳಿಗಾಗಿ ಮತ್ತು ಕಾರ್ನೀವಲ್ಗಳಂತಹ “ಸ್ಥಳೀಯ ಸಂಪ್ರದಾಯ” ದಲ್ಲಿ ಅನುಮತಿಸಲಾಗುತ್ತಿದೆ.
ಪ್ರವಾಸಿಗರಿಗೆ ಸೇರಿದಂತೆ ಯಾರಿಗೂ ಇದರಿಂದ ಹೆಚ್ಚುವರಿ ವಿನಾಯಿತಿಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
51.21 ರಷ್ಟು ಮತದಾರರು ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಪ್ರಸ್ತಾಪವನ್ನು ಬೆಂಬಲಿಸಿ ಮತ ಚಲಾಯಿಸಿದ್ದಾರೆ. ಜನಾಭಿಪ್ರಾಯದ ಪ್ರಸ್ತಾಪವು ಇಸ್ಲಾಂ ಧರ್ಮವನ್ನು ನಿರ್ದಿಷ್ಟವಾಗಿ ಉಲ್ಲೇಖಿಸದಿದ್ದರೂ, ಸ್ವಿಸ್ ಮಾಧ್ಯಮದಲ್ಲಿ “ಬುರ್ಕಾ ನಿಷೇಧ” ಎಂದು ವ್ಯಾಪಕವಾಗಿ ಉಲ್ಲೇಖಿಸಲಾಗಿದೆ. ಈ ಪ್ರಸ್ತಾಪಕ್ಕೆ ಸ್ವಿಸ್ ಧಾರ್ಮಿಕ ಸಂಸ್ಥೆಗಳು, ಮಾನವ ಹಕ್ಕುಗಳು ಮತ್ತು ನಾಗರಿಕ ಗುಂಪುಗಳು ಮತ್ತು ಫೆಡರಲ್ ಸರ್ಕಾರದಿಂದ ವಿರೋಧ ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.