ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಸಂಬಂಧಿತ ಡ್ರಗ್ಸ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಚಾರ್ಜ್ಶೀಟ್ ಸಲ್ಲಿಸಿದೆ. ಈ ಪ್ರಕರಣ ಹಲವು ಬಾಲಿವುಡ್ ಸೆಲೆಬ್ರಿಟಿಗಳೊಂದಿಗೆ ಸಂಪರ್ಕ ಹೊಂದಿದೆ.
ವಿಶೇಷ ಎನ್ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಆಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್) ನ್ಯಾಯಾಲಯದಲ್ಲಿ ಶುಕ್ರವಾರ 12,000 ಕ್ಕೂ ಹೆಚ್ಚು ಪುಟಗಳಲ್ಲಿರುವ ಚಾರ್ಜ್ಶೀಟ್ ಅನ್ನು ತನಿಖಾ ಸಂಸ್ಥೆ ಸಲ್ಲಿಸಿದೆ. ಚಾರ್ಜ್ಶೀಟ್ನಲ್ಲಿ ಆರೋಪಿಗಳ ಹೆಸರುಗಳು ಮತ್ತು ಸಾಕ್ಷಿಗಳ ಹೇಳಿಕೆಗಳು ಇವೆ.
ವರದಿಗಳ ಪ್ರಕಾರ, 33 ಆರೋಪಿಗಳನ್ನು ಚಾರ್ಜ್ಶೀಟ್ನಲ್ಲಿ ಹೆಸರಿಸಲಾಗಿದೆ ಮತ್ತು ಡಾಕ್ಯುಮೆಂಟ್ನಲ್ಲಿ 200 ಸಾಕ್ಷಿಗಳ ಹೇಳಿಕೆಗಳಿವೆ. ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ 12,000 ಪುಟಗಳು ಮತ್ತು ಡಿಜಿಟಲ್ ಸ್ವರೂಪದಲ್ಲಿ 50,000 ಪುಟಗಳು ಇದ್ದವು ಎನ್ನಲಾಗಿದೆ.
ವಶಪಡಿಸಿಕೊಂಡ ವಸ್ತುಗಳು ಮಾದಕ ವಸ್ತುಗಳು ಎಂದು ಸಾಬೀತುಪಡಿಸಲು ಎನ್ಸಿಬಿ ಪರೀಕ್ಷೆಗಳ ದೃಡೀಕರಣದ ವಿವರಗಳನ್ನು ಚಾರ್ಜ್ಶೀಟ್ನಲ್ಲಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಡಿಜಿಟಲ್ ಸಾಕ್ಷ್ಯಗಳು, ಕಾಲ್ ರೆಕಾರ್ಡ್ ವಿವರಗಳು, ವಾಟ್ಸಾಪ್ ಚಾಟ್ಗಳು, ಸ್ಥಳ ಟ್ಯಾಗ್ಗಳು, ವಿಡಿಯೋ ಮತ್ತು ಧ್ವನಿ ರೆಕಾರ್ಡಿಂಗ್ಗಳು ಮತ್ತು ಹಲವಾರು ಇತರ ದಾಖಲೆಗಳನ್ನು ಒಳಗೊಂಡಿರುವ ದೋಷಾರೋಪಣೆಯ ಪುರಾವೆಗಳು ಇದರಲ್ಲಿ ಇವೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.