ನವದೆಹಲಿ: ಸಕಾರಾತ್ಮಕ ಬೆಳವಣಿಗೆಯೊಂದರಲ್ಲಿ, ಭಾರತದ ಮೊದಲ ಸ್ಥಳೀಯ ಕೋವಿಡ್-19 ಲಸಿಕೆ ಕೋವಾಕ್ಸಿನ್ ಬಳಕೆಯನ್ನು ಅಧಿಕೃತಗೊಳಿಸಿದ ಮೊದಲ ಆಫ್ರಿಕನ್ ರಾಷ್ಟ್ರವಾಗಿ ಜಿಂಬಾಬ್ವೆ ಹೊರಹೊಮ್ಮಿದೆ. ಇದನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್ ) ಮತ್ತು ಪುಣೆ ಮೂಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಅಭಿವೃದ್ಧಿಪಡಿಸಿದೆ.
“ಜಿಂಬಾಬ್ವೆ ಭಾರತದ ಸ್ಥಳೀಯ ಕೋವಿಡ್-19 ಲಸಿಕೆ ಕೊವ್ಯಾಕ್ಸಿನ್ ಬಳಕೆಯನ್ನು ಅಧಿಕೃತಗೊಳಿಸಿದ ಆಫ್ರಿಕಾದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಆದಷ್ಟು ಬೇಗ ಜಿಂಬಾಬ್ವೆಗೆ ತಲುಪಿಸಲು ಪ್ರಯತ್ನಿಸಲಾಗುತ್ತಿದೆ” ಎಂದು ಜಿಂಬಾಬ್ವೆಯ ಭಾರತೀಯ ರಾಯಭಾರ ಕಚೇರಿ ಗುರುವಾರ ತಿಳಿಸಿದೆ.
ಗುರುವಾರ, ಜಿಂಬಾಬ್ವೆಯ ಭಾರತದ ರಾಯಭಾರಿ ವಿಜಯ್ ಖಂಡುಜಾ ಅವರು ಈ ಆಫ್ರಿಕಾ ದೇಶದ ಉಪಾಧ್ಯಕ್ಷ ಕಾನ್ಸ್ಟಾಂಟಿನೊ ಚಿವೆಂಗಾ ಅವರನ್ನು ಭೇಟಿ ಮಾಡಿದರು.
ಜಿಂಬಾಬ್ವೆಯಲ್ಲಿ ಭಾರತದ ಸ್ಥಳೀಯ ಕೋವಿಡ್-19 ಲಸಿಕೆ ಕೋವಾಕ್ಸಿನ್ ಅನ್ನು ಅಧಿಕೃತಗೊಳಿಸಿದ ವಿಪಿ ಚಿವೆಂಗಾ ಅವರು ಒಳ್ಳೆಯ ಸುದ್ದಿಯನ್ನು ತಿಳಿಸಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್ 1 ರಂದು ನವದೆಹಲಿ ಮೂಲದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ನಲ್ಲಿ ಸಂಸ್ಥೆಯ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಅವರ ಸಮ್ಮುಖದಲ್ಲಿ ಕೋವಾಕ್ಸಿನ್ ಮೊದಲ ಡೋಸ್ ಸ್ವೀಕರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.