ನವದೆಹಲಿ: ಕೋವಿಡ್ -19 ವಿರುದ್ಧ ಲಸಿಕೆ ಹಾಕಿದವರಿಗೆ ಮಾತ್ರ ಈ ವರ್ಷ ಹಜ್ಗೆ ಆಗಮಿಸಲು ಅವಕಾಶ ನೀಡಲಾಗುವುದು ಎಂದು ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯ ಹೇಳಿದೆ ಎಂದು ಸೌದಿ ಪತ್ರಿಕೆ ಒಕಾಜ್ ವರದಿ ಮಾಡಿದೆ.
“ಹಜ್ಗೆ ಬರಲು ಇಚ್ಛಿಸುವವರಿಗೆ ಕೋವಿಡ್-19 ಲಸಿಕೆ ಕಡ್ಡಾಯವಾಗಿದೆ ಮತ್ತು ಇದು ಹಜ್ಗೆ ಬರಲು ಪರವಾನಗಿ ಪಡೆಯಲು ಇರುವ ಮುಖ್ಯ ಷರತ್ತುಗಳಲ್ಲಿ ಒಂದಾಗಿದೆ” ಎಂದು ಆರೋಗ್ಯ ಸಚಿವರು ಸಹಿ ಮಾಡಿದ ಸುತ್ತೋಲೆ ಹೇಳಿದೆ.
2020 ರಲ್ಲಿ, ಹಜ್ಗೆ ಹಾಜರಾಗಲು ಅನುಮತಿಸಲಾದ ಯಾತ್ರಾರ್ಥಿಗಳ ಸಂಖ್ಯೆ ಕೇವಲ 1,000 ಆಗಿತ್ತು. ಕೊರೋನಾವೈರಸ್ ಹರಡುವುದನ್ನು ತಡೆಯಲು ಯಾತ್ರಿಕರ ಸಂಖ್ಯೆಗೆ ನಿರ್ಬಂಧ ವಿಧಿಸಲಾಗಿತ್ತು.
ಪ್ರಪಂಚದಾದ್ಯಂತದ ಲಕ್ಷಾಂತರ ಯಾತ್ರಿಕರು ಇಲ್ಲಿಗೆ ಆಗಮಿಸಿ ಒಟ್ಟು ಸೇರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಈ ಬಾರಿ ಯಾತ್ರೆ ಕೈಗೊಳ್ಳುವುದಕ್ಕೆ ಮುನ್ನ ಲಸಿಕೆ ಹಾಕಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.