ನವದೆಹಲಿ: ಭಾರತ್ ಬಯೋಟೆಕ್ ತನ್ನ ಕೊರೋನಾವೈರಸ್ ಲಸಿಕೆ ‘ಕೋವಾಕ್ಸಿನ್’ ನ 3 ನೇ ಹಂತದ ಫಲಿತಾಂಶಗಳನ್ನು ಪ್ರಕಟಿಸಿದೆ. ಕೊವ್ಯಾಕ್ಸಿನ್ ಲಸಿಕೆ ಸುಮಾರು ಶೇಕಡಾ 81ರಷ್ಟು ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ಭಾರತ್ ಬಯೋಟೆಕ್ ಹೇಳಿದೆ.
“ಇಂದು ವಿಜ್ಞಾನಕ್ಕೆ ಮತ್ತು ಕೊರೋನಾವೈರಸ್ ವಿರುದ್ಧದ ನಮ್ಮ ಹೋರಾಟಕ್ಕೆ, ಲಸಿಕೆ ಆವಿಷ್ಕಾರಕ್ಕೆ ಒಂದು ಪ್ರಮುಖ ಮೈಲಿಗಲ್ಲು. ನಮ್ಮ 3 ನೇ ಹಂತದ ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶಗಳು ಯಶಸ್ವಿಯಾಗಿದೆ, ನಾವು ಈಗ ನಮ್ಮ ಕೋವಿಡ್ -19 ಲಸಿಕೆಯ ಹಂತ 1, 2 ಮತ್ತು 3 ಪ್ರಯೋಗಗಳಿಂದ ಸುಮಾರು 27,000 ಭಾಗವಹಿಸುವವರನ್ನು ಒಳಗೊಂಡ ಡೇಟಾವನ್ನು ವರದಿ ಮಾಡಿದ್ದೇವೆ. ಕೊವಾಕ್ಸಿನ್ ಲಸಿಕೆ ಕೊರೋನಾವೈರಸ್ ವಿರುದ್ಧ ಹೆಚ್ಚಿನ ಕ್ಲಿನಿಕಲ್ ಪರಿಣಾಮಕಾರಿತ್ವದ ಪ್ರವೃತ್ತಿಯನ್ನು ತೋರಿಸುತ್ತಿದೆ. ಮಾತ್ರವಲ್ಲದೇ ವೇಗವಾಗಿ ಹೊರಹೊಮ್ಮುತ್ತಿರುವ ರೂಪಾಂತರಗಳ ವಿರುದ್ಧ ಕೂಡ ಗಮನಾರ್ಹವಾದ ಇಮ್ಯುನೊಜೆನೆಸಿಟಿಯನ್ನು ಸಹ ತೋರಿಸುತ್ತಿದೆ” ಎಂದು ಬಯೋಟೆಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತ್ ಬಯೋಟೆಕ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ಎಲಾ ಮಾತನಾಡಿ, “ಎರಡನೇ ಡೋಸ್ ನಂತರ ಸೋಂಕು ಇಲ್ಲದವರಲ್ಲಿ ಕೋವಿಡ್ -19 ಅಬಾರದಂತೆ ತಡೆಗಟ್ಟುವಲ್ಲಿ ಕೋವಾಕ್ಸಿನ್ 81% ಮಧ್ಯಂತರ ಪರಿಣಾಮಕಾರಿತ್ವವನ್ನು ತೋರಿಸಿದೆ” ಎಂದು ಹೇಳಿದರು.
“ಪ್ರಪಂಚದ ಅನೇಕ ದೇಶಗಳು ಕೋವಾಕ್ಸಿನ್ ಬಗ್ಗೆ ಬಲವಾದ ಆಸಕ್ತಿ ತೋರಿಸಿವೆ, ಪೂರೈಕೆಗಳು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಇರುವುದನ್ನು ಖಾತ್ರಿಪಡಿಸಿಕೊಳ್ಳಲು ಕಂಪನಿಯು ಸಂಪೂರ್ಣವಾಗಿ ಬದ್ಧವಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.