ನಮ್ಮ ಹಿರಿಯರು ಮಾಡುತ್ತಿದ್ದ ಅನೇಕ ಕಸುಬುಗಳು ತೆರೆಮರೆಯಲ್ಲಿ ಇಂದಿಗೂ ಜೀವಂತವಾಗಿದೆ. ಇಂತಹ ಕಸುಬುಗಳಿಗೆ ಇನ್ನಷ್ಟು ಪ್ರೋತ್ಸಾಹವನ್ನು ನೀಡುವ ಕೆಲಸವನ್ನು ನಾವು ಮಾಡಬೇಕಿದೆ. ಇಂತಹ ಒಂದು ಕಸುಬುಗಳಲ್ಲಿ ಕೌದಿ ತಯಾರಿಕೆ ಕೂಡ ಒಂದು. ಉತ್ತರ ಕರ್ನಾಟಕದಲ್ಲಿ ಇದು ಹೆಚ್ಚು ಪ್ರಚಲಿತದಲ್ಲಿದೆ.
ಬೆಳಗಾವಿ ಗೋಕಾಕ್ ತಾಲೂಕಿನ ರತ್ನಾ ನಾಗಪ್ಪ ಗೊಂಧಳಿ ಅವರು ಇಂದಿಗೂ ಈ ಕಸುಬನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ತಿಂಗಳಿಗೆ ಸುಮಾರು ಎರಡು ಕೌದಿಗಳನ್ನು ಇವರು ತಯಾರಿಸುತ್ತಾರೆ. ಹಳೆಯ ಸೀರೆ, ಇತರ ಬಟ್ಟೆಗಳನ್ನು ಪಡೆದುಕೊಂಡು ಅವುಗಳನ್ನು ಕೈಯಿಂದಲೇ ಹೊಲಿದು ಇವರು ಕೌದಿಯನ್ನು ತಯಾರಿಸುತ್ತಾರೆ. ವಿಶೇಷವೆಂದರೆ ಅವರಿಗೆ ಕೌದಿ ಹೊಲಿಯುವ ಕಲೆ ಕರಗತವಾಗಿದ್ದು ಅವರ ಅತ್ತೆಯಿಂದ, ಇಂದು ಅವರು ತಮ್ಮ ಸೊಸೆ ಮತ್ತು ಕುಟುಂಬದ ಇತರರೊಂದಿಗೆ ಸೇರಿ ಕೌದಿ ಕಸುಬನ್ನು ಮುಂದುವರೆಸಿದ್ದಾರೆ. ಸುಮಾರು 40 ವರ್ಷಗಳಿಂದ ಇವರು ಈ ಕಸುಬು ಮಾಡುತ್ತಿದ್ದಾರೆ.
ಆರ್ಡರ್ ಪಡೆದುಕೊಂಡು ಇವರು ಕೌದಿ ತಯಾರಿಸುತ್ತಾರೆ. ಒಂದು ಕೌದಿಗೆ ಇವರು ಸುಮಾರು 700 ರೂಪಾಯಿಗಳನ್ನು ಪಡೆಯುತ್ತಾರೆ. ಈ ಕೌದಿಗಳು ಸುಮಾರು 30 ವರ್ಷಗಳವರೆಗೂ ಬಾಳಿಕೆ ಬರುತ್ತವೆ. ಚಳಿಗಾಲದ ಸಂದರ್ಭದಲ್ಲಿ ಇವುಗಳು ಹೆಚ್ಚು ಪ್ರಯೋಜನಕಾರಿಯಾಗಿವೆ.
ರತ್ನಾ ಅವರ ಕೌದಿ ಉದ್ಯಮಕ್ಕೆ ಪ್ರೋತ್ಸಾಹವನ್ನು ನೀಡಲು ಮುಂದಾಗಿದೆ ಸೇವಾಕಾರ್ಟ್ ವೆಬ್ಸೈಟ್ ಮುಂದಾಗಿದೆ. ಆನ್ಲೈನ್ ಮೂಲಕ ಕೌದಿ ಬುಕ್ಕಿಂಗ್ ಮಾಡಲು ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದೆ. ಆಫ್ಲೈನ್ನಲ್ಲೂ ಅವರ ಉತ್ಪನ್ನಕ್ಕೆ ಬೇಡಿಕೆ ಬರುವಂತೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಮುಂದಿಡಲಾಗಿದೆ. ದೇಶೀಯ ಉದ್ಯಮ ಉಳಿಯಲಿ ಎಂಬ ಉದ್ದೇಶದಿಂದ ಸೇವಾಕಾರ್ಟ್ ಈ ಮಹತ್ಕಾರ್ಯವನ್ನು ಮಾಡುತ್ತಿದೆ. ರತ್ನಾ ಅವರಂಥ ಅನೇಕ ಕುಶಲಕರ್ಮಿಗಳ ಕೆಲಸಗಳನ್ನು ಗುರುತಿಸಿ ಆನ್ಲೈನ್ ಮುಖಾಂತರ ಮಾರುಕಟ್ಟೆ ಒದಗಿಸುವ ಕಾರ್ಯವನ್ನು ಸೇವಾಕಾರ್ಟ್ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.