ಪುತ್ತೂರು: ತುಳು ಎನ್ನುವಂತದ್ದು ಒಂದು ಭಾಷೆಯಲ್ಲ, ಅದೊಂದು ಸಂಸ್ಕೃತಿ. ಪಂಚದ್ರಾವಿಡ ಭಾಷೆಗಳು ತುಳುವಿನಲ್ಲಿ ಅಡಕವಾಗಿದೆ. ಆಟಿ ತಿಂಗಳು ಎನ್ನುವಂತದ್ದು ಬೇಸಿಗೆ ಮತ್ತು ಮಳೆಗಾಲದ ನಡುವೆ ಬರುವ ಸಂಧಿಕಾಲ ಎನ್ನುವುದರ ಜೊತೆಗೆ ಆಟಿ ತಿಂಗಳ ಮಹತ್ವವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು ಇದರ ಸದಸ್ಯರು ಹಾಗೂ ಪುತ್ತೂರು ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ದುರ್ಗಾಪ್ರಸಾದ್ ರೈಯವರು ಹೇಳಿದರು. ಅವರು ಕಾರ್ಯಕ್ರಮವನ್ನು ಚೆನ್ನೆಮಣೆ ಆಟವನ್ನು ಆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರ ಕೆ. ಸೀತಾರಾಮ ರೈಯವರು ಮಾತನಾಡುತ್ತ ತುಳು ನಾಡಿನ ಜನರಾದ ನಾವು ಪ್ರಕೃತಿಯನ್ನು ಆರಾಧಿಸುವವರು. ನಮ್ಮ ಹಿರಿಯರು ಆಚರಿಸಿಕೊಂಡು ಬಂದ ಆಚರಣೆಗಳಿಗೆಲ್ಲಾ ಒಂದು ಅರ್ಥವಿದೆ. ಈ ಆಚರಣೆಗಳನ್ನೆಲ್ಲಾ ವೈಜ್ಞಾನಿಕ ನೆಲೆಯಿಂದ ಪರಿಶೀಲಿಸಿ ಆಚರಿಸಿದಾಗ ಅದಕ್ಕೆ ಒಂದು ಮಹತ್ವ ಸಿಗುತ್ತದೆ ಎಂಬುದಾಗಿ ತಿಳಿಸಿದರು.
ಸಂಸ್ಥೆಯ ಪ್ರಭಾರ ಪ್ರಾಂಶುಪಾಲರಾದ ಶ್ರೀ ಶೇಷಗಿರಿ ಎಂ.ರವರು ತಮ್ಮ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಗೈದು, ಸಾಂಸ್ಕೃತಿಕ ಸಂಘದ ವಿದ್ಯಾರ್ಥಿ ಸಂಘಟಕರಾದ ಅಶ್ವಿನ್ ರೈ ವಂದಿಸಿದರು. ಅತಿಥಿಗಳ ಪರಿಚಯವನ್ನು ಸಾಂಸ್ಕೃತಿಕ ಸಂಘದ ಉಪಸಂಘಟಕರಾದ ಸುಶ್ಮಿತಾ ರೈ ವಾಚಿಸಿದರು. ಕಾರ್ಯಕ್ರಮವು ಕು.ಸುಶ್ಮಿತ, ಜಿಸ್ಮಿತಾ, ದಿವ್ಯ ಮತ್ತು ಶೃತಿ ಇವರ ಆಶಯಗೀತೆಯೊಂದಿಗೆ ಆರಂಭಗೊಂಡಿತು. ಕಾರ್ಯಕ್ರಮದ ನಿರೂಪಣೆಯನ್ನು ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಧನ್ಯಶ್ರೀ ನೆರವೇರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ರೀತಿಯ ತಿಂಡಿತಿನಸುಗಳ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ವಿದ್ಯಾರ್ಥಿಗಳಿಂದ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.