ನವದೆಹಲಿ: ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ. 75 ರಷ್ಟು ಮೀಸಲಾತಿಯನ್ನು ಹರಿಯಾಣ ಸರ್ಕಾರ ಜಾರಿಗೊಳಿಸಿದೆ
ಹರಿಯಾಣ ರಾಜ್ಯಪಾಲರು ನಿನ್ನೆ, ತಿಂಗಳಿಗೆ ರೂ. 50,000 ವರೆಗೆ ವೇತನ ಇರುವ ಶೇ. 75ರಷ್ಟು ಖಾಸಗಿ ವಲಯದ ಉದ್ಯೋಗಗಳನ್ನು ರಾಜ್ಯದ ಜನರಿಗೆ ಕಾಯ್ದಿರಿಸುವ ಮಸೂದೆಗೆ ಅನುಮೋದನೆ ನೀಡಿದ್ದಾರೆ.
ಈ ಕಾಯ್ದೆಯನ್ನು ಕಳೆದ ವರ್ಷ ರಾಜ್ಯ ವಿಧಾನಸಭೆ ಅಂಗೀಕರಿಸಿತ್ತು. ಕಂಪೆನಿಗಳು, ಸಂಘಗಳು ಮತ್ತು ಟ್ರಸ್ಟ್ಗಳನ್ನು ಒಳಗೊಂಡಿರುವ ಖಾಸಗಿ ವಲಯದ ಉದ್ಯೋಗಗಳಲ್ಲಿ ರಾಜ್ಯದ ಯುವಜನರಿಗೆ ಈಗ ಶೇಕಡಾ 75 ರಷ್ಟು ಮೀಸಲಾತಿ ಸಿಗಲಿದೆ ಎಂದು ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲ ಹೇಳಿದ್ದಾರೆ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಸರ್ಕಾರ ರಚಿಸಿದ್ದ ಚೌಟಾಲ ಅವರ ಜನನಾಯಕ್ ಜನತಾ ಪಕ್ಷದ ಮುಖ್ಯ ಚುನಾವಣಾ ಭರವಸೆಯೇ ಸ್ಥಳೀಯರಿಗೆ ಖಾಸಗಿ ವಲಯದಲ್ಲಿ ಮೀಸಲಾತಿ ನೀಡುವುದು ಆಗಿತ್ತು. ಕಳೆದ ವರ್ಷ ಚೌಟಾಲ ಮಂಡಿಸಿದ ಈ ಮಸೂದೆಯಲ್ಲಿ ಖಾಸಗಿ ವಲಯದ ಕಂಪೆನಿಗಳು ತಿಂಗಳಿಗೆ ರೂ 50,000 ವರೆಗಿನ ವೇತನದ ಶೇಕಡಾ 75 ರಷ್ಟು ಉದ್ಯೋಗಗಳನ್ನು ಹರಿಯಾಣದ ಸ್ಥಳೀಯರಿಗೆ ಕಾಯ್ದಿರಿಸುವುದು ಕಡ್ಡಾಯವಾಗಿದೆ.
ಕಂಪನಿಗಳು ತಿಂಗಳಿಗೆ ರೂ 50,000 ವರೆಗಿನ ವೇತನದ ಎಲ್ಲಾ ಉದ್ಯೋಗಿಗಳ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು, ಮಸೂದೆ ಕಾನೂನಾಗಿ ಮಾರ್ಪಟ್ಟ ಮೂರು ತಿಂಗಳೊಳಗೆ ಅದನ್ನು ಕಾರ್ಯರೂಪಕ್ಕೆ ತರಲು ವಿಫಲವಾದರೆ ದಂಡವನ್ನು ತೆರಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.