ಬೆಂಗಳೂರು: ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ವಲಯದ ಉತ್ತೇಜನಕ್ಕಾಗಿ ರೂಪಿಸಿರುವ ‘ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ-2021’ ಅನ್ನು ಐಟಿ, ಬಿಟಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ ಅಶ್ವತ್ಥ ನಾರಾಯಣ್ ಅವರು ಇಂದು ಬೆಂಗಳೂರಿನಲ್ಲಿ ಅನಾವರಣಗೊಳಿಸಿದರು.
ಬಳಿಕ ಮಾತನಡಿದ ಅವರು, ರಾಜ್ಯದಲ್ಲಿ ಸಂಶೋಧನೆಗಾಗಿ ಹೆಚ್ಚಿನ ಅನುಕೂಲಕರ ವೇದಿಕೆಯನ್ನು ರೂಪಿಸಲು, ಹೊಸ ER&D ನೀತಿಯನ್ನು ಪ್ರಾರಂಭಿಸುವ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ನೀಡುವ ಉತ್ತೇಜನವನ್ನು ಪ್ರವರ್ತಿಸಿದೆ. ಈ ಹೊಸ ನೀತಿಯು ಕರ್ನಾಟಕವು ಭಾರತದ ER&D ಆರ್ಥಿಕತೆಯ ಸುಮಾರು 45% ರಷ್ಟು ಕೊಡುಗೆ ನೀಡಲು ಮತ್ತು ಪ್ರಮುಖ ಜಾಗತಿಕ ಸಂಸ್ಥೆಗಳಿಗೆ ಕರ್ನಾಟಕವನ್ನು ತಮ್ಮ ʼಆದ್ಯತೆಯ ER&D ಗಮ್ಯಸ್ಥಾನʼ ವಾಗಿ ಆಯ್ಕೆ ಮಾಡಲು ಉತ್ತೇಜಿಸುತ್ತದೆ. ಇದು ಅಂತಿಮವಾಗಿ ರಾಜ್ಯದಲ್ಲಿ 50 ಸಾವಿರ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಅವರು ತಿಳಿಸಿದರು.
ಈ ನೀತಿಯು ಶೈಕ್ಷಣಿಕ ಸಂಶೋಧನೆ, ER&D ಮತ್ತು ಕೌಶಲ್ಯ ಕೋರ್ಸ್ಗಳ ಕೈಗಾರಿಕಾ ಅನ್ವಯಿಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಉದ್ಯಮ ಮತ್ತು ಶೈಕ್ಷಣಿಕ ರಂಗಗಳ ನಡುವಿನ ಅಂತರವನ್ನು ನೀತಿಯು ನಿವಾರಿಸುತ್ತದೆ. ಇದು ರಾಜ್ಯದ ಎಂಜಿನಿಯರಿಂಗ್ ಪಠ್ಯಕ್ರಮದಲ್ಲಿ ಈ ರೀತಿಯ ಹೊಸ ಕೋರ್ಸ್ಗಳನ್ನು ಸೇರಿಸುವುದನ್ನು ಮತ್ತಷ್ಟು ಉತ್ತೇಜಿಸಲಿದೆ. ಈ ನೀತಿಯು ಬಿಯಾಂಡ್ ಬೆಂಗಳೂರು ಉಪಕ್ರಮಕ್ಕೂ ಪೂರಕವಾಗಿರಲಿದೆ. ದೇಶೀಯ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿಯೂ ಈ ನೀತಿ ಮಹತ್ವ ಪಡೆಯಲಿದೆ ಎಂದು ಅವರು ಹೇಳಿದ್ದಾರೆ. ಈ ನೀತಿಯು MNCಗಳಿಗೆ ತಮ್ಮ R&D ಕೇಂದ್ರಗಳನ್ನು ಬೆಂಗಳೂರು ಹೊರತಾದ ರಾಜ್ಯದ ಇತರ ನಗರಗಳಲ್ಲಿ ಸ್ಥಾಪಿಸಲು ಮತ್ತು ವಿಸ್ತರಿಸಲು ಬಾಡಿಗೆ ಮರುಪಾವತಿ, ನೇಮಕಾತಿ ನೆರವು ಮತ್ತು ಹೂಡಿಕೆ ಸಬ್ಸಿಡಿಗಳ ರೂಪದಲ್ಲಿ ಉತ್ತೇಜಿಸಲಿದೆ ಎಂದು ಉಪಮುಖ್ಯಮಂತ್ರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಶೋಧನೆ ಮತ್ತು ಅಭಿವೃದ್ಧಿ ವಲಯದಲ್ಲಿ ರಾಜ್ಯದಲ್ಲಿ ಹೊಸ ಮುನ್ನುಡಿ!@NASSCOM ಸಹಯೋಗದಲ್ಲಿ "ಅಭಿಯಾಂತ್ರಿಕ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ 2021" ಪ್ರಾರಂಭಿಸಿರುವುದು ಸಂತಸ ತಂದಿದೆ. ಸರ್.ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಪಥದಲ್ಲಿ ಸಾಗುತ್ತಿರುವ ಕರ್ನಾಟಕವು ಸಂಶೋಧನಾ ನಾವೀನ್ಯತೆ ಪರಿಸರ ವ್ಯವಸ್ಥೆಗೆ ನೆಲೆಯಾಗಿದೆ.
1/9 pic.twitter.com/yH3cmNQlaU
— Dr. C.N. Ashwath Narayan (@drashwathcn) March 2, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.