ನವದೆಹಲಿ: ವಿಶ್ವದ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಮತ್ತು ಸ್ಪೇಸ್ಎಕ್ಸ್ನ ಬಹು ನಿರೀಕ್ಷಿತ ಹೈಸ್ಪೀಡ್ ಇಂಟರ್ನೆಟ್ ಬಾಹ್ಯಾಕಾಶ ಆಧಾರಿತ ಸ್ಟಾರ್ಲಿಂಕ್ ಸೇವೆಯು ಸ್ಪೇಸ್ಎಕ್ಸ್ ಉಪಗ್ರಹಗಳ ಮೂಲಕ ಕಕ್ಷೆಯಲ್ಲಿ ಉಡಾವಣೆಯಾದ ನಂತರ ಭಾರತದಲ್ಲಿ 2022 ರಲ್ಲಿ ಕಾರ್ಯಾಚರಿಸಲಿದೆ.
ಈ ಹೈಸ್ಪೀಡ್ ಇಂಟರ್ನೆಟ್ ಭಾರತದ ಗ್ರಾಹಕರಿಗೆ ಅತೀ ಕಡಿಮೆ ದರದಲ್ಲಿ ಸಿಗಲಿದೆ. ಇದರ ಸೇವೆಯ ಮುಂಗಡ ಕಾಯ್ದಿರಿಸುವಿಕೆಗಾಗಿ ರೂ. 7000 ದರ ವನ್ನು ನಿಗದಿ ಪಡಿಸಿದೆ. ಸ್ಟಾರ್ಲಿಂಕ್ ಸೇವೆಯನ್ನು ಯಾರು ಮೊದಲು ಮುಂಗಡ ಪಾವತಿ ಮೂಲಕ ಕಾಯ್ದಿರಿಸುತ್ತಾರೆಯೋ ಅವರಿಗೆ ಈ ಸೇವೆಯನ್ನು ಆದ್ಯತೆಯಲ್ಲಿ ಒದಗಿಸಲಿದೆ. ಮುಂಗಡ ಮೊತ್ತವನ್ನು ಮರುಪಾವತಿಸಲಾಗುವುದು ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸದ್ಯ ಈ ಹೈ ಸ್ಪೀಡ್ ಇಂಟರ್ನೆಟ್ ಸೇವೆಯು ಬೇಟಾ ಪರೀಕ್ಷೆಯ ಹಂತದಲ್ಲಿದೆ. ದೇಶದ ಬಳಕೆದಾರರು ತಮ್ಮ ಪ್ರದೇಶದಲ್ಲಿ ಈ ಸೇವೆಯ ಲಭ್ಯತೆಯನ್ನು ಸ್ಟಾರ್ ಲಿಂಕ್ ವೆಬ್ಸೈಟ್ನಲ್ಲಿ ಮತ್ತು ಅಂಚೆ ಕೋಡ್ ನಮೂದಿಸುವ ಮೂಲಕ ತಿಳಿದುಕೊಳ್ಳಬಹುದಾಗಿದೆ.
ʼನಾವು ಹೆಚ್ಚಿನ ಉಪಗ್ರಹಗಳನ್ನು ಉಡಾಯಿಸುವಾಗ ಹೆಚ್ಚಿನ ಕೇಂದ್ರಗಳನ್ನು ಸ್ಥಾಪಿಸುವುದು, ನೆಟ್ವರ್ಕಿಂಗ್ ಸಾಫ್ಟ್ವೇರ್ ಅನ್ನು ಸುಧಾರಿಸಲಿದ್ದೇವೆ ಎಂದು ಸಂಸ್ಥೆ ಹೇಳಿಕೊಂಡಿದೆ. ಕಂಪನಿಯು ಪ್ರಸ್ತುತ ಸುಮಾರು 12,000 ಉಪಗ್ರಹಗಳ ಮೂಲಕ ಇಂಟರ್ನೆಟ್ ಅನ್ನು ತಲುಪಿಸುವ ಯೋಜನೆಯಡಿ ಈಗಾಗಲೇ 50 ರಿಂದ 150Mbps ಹೈ ಸ್ಪೀಡ್ ವೇಗವನ್ನು ನೀಡುತ್ತಿದೆ. ಈ ವೇಗ ಮುಂದಿನ ಹಂತದಲ್ಲಿ ದ್ವಿಗುಣಗೊಳ್ಳಲಿದೆ ಎಂದು ವರದಿಗಳು ತಿಳಿಸಿವೆ. ಸ್ಟಾರ್ಲಿಂಕ್ ಈಗಾಗಲೇ 1000 ಕ್ಕೂ ಹೆಚ್ಚು ಉಪಗ್ರಹಗಳನ್ನು ಕಕ್ಷೆಯಲ್ಲಿ ಸ್ಥಾಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.