ಮಂಗಳೂರು: ಕುಲಶೇಖರ-ಕಣ್ವಗುಡ್ಡೆ ಸಂಪರ್ಕಿಸುವ ಪರ್ಯಾಯ ರಸ್ತೆಯಲ್ಲಿ ಮರಳು ಲಾರಿಯೊಂದು ರಸ್ತೆ ಬದಿಯ ಇಳಿಜಾರಿಗೆ ವಾಲಿ ಸಿಲುಕಿದ್ದರ ಪರಿಣಾಮ ಕಣ್ವಗುಡ್ಡೆ ಸಂಪರ್ಕಿಸುವ ರಸ್ತೆ ಸಂಚಾರ ಮತ್ತೆ ಸ್ಥಗಿತವಾಗಿದೆ.
ವಾರದ ಹಿಂದಷ್ಟೇ ಇಲ್ಲಿನ ಪ್ರಮುಖ ರಸ್ತೆಯ ಮಧ್ಯಭಾಗದ ಸೇತುವೆ ಕುಸಿದ ಪರಿಣಾಮ ವಾಹನಗಳು ಈ ಪರ್ಯಾಯ ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಆದರೆ ಇದೀಗ ಮರಳು ಲಾರಿಯೊಂದು ಈ ರಸ್ತೆ ಬದಿಯ ಇಳಿಜಾರಿಗೆ ವಾಲಿ ಸಿಲುಕಿದ್ದು, ಮತ್ತೆ ರಸ್ತೆ ಸಂಚಾರ ಸ್ಥಗಿತವಾಗಿದೆ. ಈ ರಸ್ತೆಯ ಕೆಳಭಾಗದಲ್ಲಿ ಅನೇಕ ಮನೆಗಳಿದ್ದು ಲಾರಿ ಬಿದ್ದಿದ್ದರೆ ದೊಡ್ಡ ಪ್ರಮಾಣದ ಅವಘಡ ಸಂಭವಿಸುವ ಸಾಧ್ಯತೆಯಿತ್ತು ಎನ್ನಲಾಗಿದೆ.
ಸ್ಥಳೀಯರು ಹೇಳುವ ಪ್ರಕಾರ, ಈ ಪರ್ಯಾಯ ರಸ್ತೆಯಲ್ಲಿ ಘನ ವಾಹನಗಳು ಸಂಚರಿಸಲು ಸಾಧ್ಯವಿಲ್ಲದಿದ್ದರೂ ಸಂಚರಿಸುತ್ತಿವೆ. ಈ ಬಗ್ಗೆ ಕಾರ್ಪೋರೇಟರ್ ಪ್ರಕಾಶ್ ಅವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಪ್ರಮುಖ ರಸ್ತೆಯಲ್ಲಿ ಸೇತುವೆ ಮುರಿದು ತಿಂಗಳು ಸಮೀಪಿಸಿದರೂ ಕಾಮಗಾರಿ ಮುಗಿದಿಲ್ಲ. ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಸೂಕ್ತ ರಸ್ತೆ ವ್ಯವಸ್ಥೆಯಿಲ್ಲದೇ ಪರದಾಡುವಂತಾಗಿದ್ದು, ಜನರ ಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.