ನವದೆಹಲಿ: ಭಯೋತ್ಪಾನೆಗೆ ಹಣಕಾಸು ನೆರವನ್ನು ನೀಡುವುದನ್ನು ನಿಲ್ಲಿಸದ ಪಾಕಿಸ್ಥಾನವನ್ನು ‘ಗ್ರೇ ಲಿಸ್ಟ್’ ನಲ್ಲೇ ಮುಂದುವರಿಸಲು ಎಫ್ಎಟಿಎಫ್ ನಿರ್ಧರಿಸಿದೆ. ಎಫ್ಎಟಿಎಫ್ ಹಣಕಾಸು ವಂಚನೆ ಮತ್ತು ಭಯೋತ್ಪಾದಕ ಹಣಕಾಸು ವಿರುದ್ಧದ ಜಾಗತಿಕ ಸಂಸ್ಥೆಯಾಗಿದೆ.
ಪಾಕಿಸ್ಥಾನಕ್ಕೆ ನೀಡಲಾದ ಗಡುವು ಈಗಾಗಲೇ ಮುಕ್ತಾಯಗೊಂಡಿದೆ, ಆದರೂ ಅದು ಸಂಪೂರ್ಣ ಸಮಸ್ಯೆ ಬಗೆಹರಿಸಿಲ್ಲ ಎಂದು ಸಭೆಯ ನಂತರ ಪ್ಯಾರಿಸ್ ಮೂಲದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ಅಧ್ಯಕ್ಷ ಮಾರ್ಕಸ್ ಪ್ಲಿಯರ್ ಹೇಳಿದ್ದಾರೆ.
ಭಯೋತ್ಪಾದಕ ಹಣಕಾಸು ಪರಿಶೀಲನೆಯಲ್ಲಿ ಪಾಕಿಸ್ಥಾನ ಕಡೆಯಿಂದ ಗಂಭೀರ ಲೋಪ ಕಂಡುಬಂದಿದ್ದು ಯುಎನ್ ಗೊತ್ತುಪಡಿಸಿದ ಭಯೋತ್ಪಾದಕರು ಮತ್ತು ಅವರ ಸಹಚರರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಆ ರಾಷ್ಟ್ರ ಇನ್ನೂ ತನ್ನ ಬದ್ದತೆ ಪ್ರದರ್ಶಿಸಿಲ್ಲಎಂದು ಅವರು ಹೇಳಿದರು.
ಪಾಕಿಸ್ಥಾನ ನ್ಯಾಯಾಲಯಗಳು ಭಯೋತ್ಪಾದನೆಯಲ್ಲಿ ಭಾಗಿಯಾಗಿರುವವರಿಗೆ ಪರಿಣಾಮಕಾರಿ, ನಿರ್ಣಾಯಕ ಮತ್ತು ಪ್ರಮಾಣಾನುಗುಣವಾದ ಶಿಕ್ಷೆಯನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. 2002ರಲ್ಲಿ ಹತ್ಯೆಯಾದ ಅಮೆರಿಕಾದ ಪತ್ರಕರ್ತ ಡೇನಿಯಲ್ ಪರ್ಲ್ ಪ್ರಕರಣದಲ್ಲಿ ಮುಖ ಆರೋಪಿ ಒಮರ್ ಸಯೀದ್ ಶೇಖ್ ನನ್ನು ಪಾಕಿಸ್ಥಾನ ಸುಪ್ರೀಂಕೋರ್ಟ್ ಖುಲಾಸೆಗೊಳಿಸಿರುವುದನ್ನು ಅವರು ಉಲ್ಲೇಖಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.