ಬೆಂಗಳೂರು: ಸದ್ಯ ಸ್ಥಗಿತಗೊಂಡಿರುವ ಬಿಡಿಎ ವಾಣಿಜ್ಯ ಸಂಕೀರ್ಣಗಳ ಅಭಿವೃದ್ಧಿ ಕಾಮಗಾರಿಗಳು ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ.
ಎಚ್ ಎಸ್ ಆರ್ ಲೇಔಟ್, ಇಂದಿರಾನಗರ, ಕೋರಮಂಗಲ, ಆಸ್ಟಿನ್ಟೌನ್, ವಿಜಯನಗರ, ಸದಾಶಿವನಗರ, ಆರ್ ಟಿ ನಗರ ಮೊದಲಾದ ನಗರಗಳಲ್ಲಿನ ಕಾಮಗಾರಿ ಸ್ಥಗಿತಗೊಂಡಿರುವ ವಾಣಿಜ್ಯ ಸಂಕೀರ್ಣಗಳ ಅಭಿವೃದ್ಧಿ, ನಿರ್ಮಾಣ ಕಾಮಗಾರಿಗಳು ಸದ್ಯದಲ್ಲೇ ಮತ್ತೆ ಆರಂಭವಾಗಲಿದೆ. 17 ತಿಂಗಳುಗಳ ಬಳಿಕ ಕಾಮಗಾರಿಗಳು ಮರು ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಈ ಮರು ನಿರ್ಮಾಣ ಕಾಮಗಾರಿ ನಡೆಸಲು ನಿರ್ಧರಿಸಲಾಗಿತ್ತು. ಕಾಮಗಾರಿಗೆ ಔಪಚಾರಿಕ ಒಪ್ಪಿಗೆಯನ್ನು ಕಾಯುತ್ತಿರುವುದಾಗಿ ಬಿಡಿಎ ಅಧಿಕಾರಿಗಳು ಹೇಳಿದ್ದಾರೆ.
ಸದ್ಯ ಏಳು ಸಂಕೀರ್ಣಗಳಲ್ಲಿ 566 ಮಳಿಗೆಗಳಿದ್ದು, ವಾರ್ಷಿಕ 7 ಕೋಟಿ ರೂ. ಆದಾಯ ಬರುತ್ತಿದೆ. ಮರುನಿರ್ಮಣವಾದ ಬಳಿಕ 38.98 ಕೋಟಿ ಆದಾಯ ದೊರೆಯುವ ನಿರೀಕ್ಷೆ ಇದೆ. ಪ್ರತ್ಯೇಕ ಪ್ಯಾಕೇಜ್ನಲ್ಲಿ ಈ ಗುತ್ತಿಗೆಯನ್ನು ಘೋಷಣೆ ಮಾಡಲಾಗಿದೆ. ಹಿಂದಿನ ಗಡುವಿನ ಪ್ರಕಾರ 2021 ರ ಮಾರ್ಚ್ ಗೆ ಕಾಮಗಾರಿ ಸಂಪೂರ್ಣವಾಗಬೇಕಿತ್ತು. ಆದರೆ, ಸದ್ಯ ಇದನ್ನು 2023 ರ ವರೆಗೆ ಮುಂದೂಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.