ಮಂಗಳೂರು: ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ವತಿಯಿಂದ ಸೆಂಟರ್ ಫಾರ್ ಕಾಂಟೆಂಪರರಿ ಇಶ್ಯೂಸ್ ಸಹಯೋಗದಲ್ಲಿ, ಇಂದು ನಗರದ ಹೋಟೆಲ್ ಓಷಿಯನ್ ಪರ್ಲ್ ಸಭಾಂಗಣದಲ್ಲಿ ‘ಇನ್ನೋವೇಶನ್ ಕಾನ್ಕ್ಲೇವ್’ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ರಾಜ್ಯದ ಉಪಮುಖ್ಯಮಂತ್ರಿ ಡಾ. ಅಶ್ವಥ ನಾರಾಯಣ್ ಉದ್ಘಾಟಿಸಿ, ಉದ್ಯಮಶೀಲತೆ, ಪ್ರತಿಭೆ, ಕೌಶಲ್ಯ ಮೊದಲಾದವುಗಳಿಗೆ ಹೆಸರು ಪಡೆದಿರುವ ಕರಾವಳಿಯಲ್ಲಿ ಐಟಿ-ಬಿಟಿ ಜೊತೆಗೆ ಇತರ ಉದ್ಯಮಗಳೂ ತಲೆ ಎತ್ತುವಂತೆ ಮಾಡುವುದು ನಮ್ಮ ಸರ್ಕಾರದ ಆದ್ಯತೆ. ಇದಕ್ಕಾಗಿ ಬಿಯಾಂಡ್ ಬೆಂಗಳೂರು ಯೋಜನೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡಗಳನ್ನು ಒಳಗೊಂಡ ಮಂಗಳೂರು ಕ್ಲಸ್ಟರ್ ಉದಯೋನ್ಮುಖ ಕ್ಷೇತ್ರವಾಗಿ ಹೊರಹೊಮ್ಮಿದೆ. ಇಲ್ಲಿನ ಯುವಜನರ ಆಸೆ ಆಕಾಂಕ್ಷೆಗಳಿಗೆ ಪೂರಕವಾಗಿ ಆವಿಷ್ಕಾರ, ತಂತ್ರಜ್ಞಾನ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸರ್ಕಾರ ಸಹಕಾರ ನೀಡಲಿದೆ ಎಂದು ಹೇಳಿದ್ದಾರೆ.
ಮಾತ ತುಳುವೆರೆಗ್ ಸೊಲ್ಮೆಲು!@ITBTGoK ಆಯೋಜನೆ ಮಲ್ತಿನ 'ಮಂಗಳೂರು ಆವಿಷ್ಕಾರ ಸಮಾವೇಶ'ಡ್ #BeyondBengaluru ಯೋಜನೆದ ವಿಚಾರಲೆನ್ ಮಾತೆರೆಡ ಪಾತೆರಿಯೆ.
ಉದ್ಯಮಶೀಲತೆ, ಪ್ರತಿಭೆ, ಕೌಶಲ್ಯ ವಿಷಯಲೆಗ್ ಎಡ್ಡೆ ಪುದರ್ ಇಪ್ಪುನ ಕರಾವಳಿ ಪ್ರದೇಶಡ್ ಐಟಿ-ಬಿಟಿದ ಒಟ್ಟುಗ್ ಬೇತೆ ಉದ್ಯಮಲು ಬರೋಡು ಪನ್ಪಿನ ನಮ್ಮ ಸರ್ಕಾರದ ಆದ್ಯತೆ ಆತುಂಡ್.
1/2 pic.twitter.com/0TYOYt8ZVZ
— Dr. C.N. Ashwath Narayan (@drashwathcn) February 24, 2021
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಿಯೋನಿಕ್ಸ್ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ, ಶಾಸಕರುಗಳಾದ ವೇದವ್ಯಾಸ ಕಾಮತ್, ಡಾ. ವೈ ಭರತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.