ಸೌದಿ: ಸೌದಿ ಅರೇಬಿಯಾದ ಮಹಿಳೆಯರು ಇನ್ನು ಮುಂದೆ ಆ ರಾಷ್ಟ್ರದ ಸೇನೆಯ ಸೈನಿಕರು, ಲ್ಯಾನ್ಸ್ ಕಾರ್ಪೋರಲ್ಗಳು, ಕಾರ್ಪೋರಲ್ಗಳು, ಸಾರ್ಜೆಂಟ್ಗಳು ಮತ್ತು ಸಿಬ್ಬಂದಿ ಸಾರ್ಜೆಂಟ್ಗಳಂತಹ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶವನ್ನು ಪಡೆದುಕೊಂಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಮಿಲಿಟರಿಗೆ ಸೇರ್ಪಡೆಗೊಳ್ಳಲು ಬೇಕಾದ ಸಾಮಾನ್ಯ ಅಂಶಗಳಾದ ಸಾಮಾನ್ಯ ತೂಕ, ಎತ್ತರದ ಮಾನದಂಡಗಳು ಸೇರಿದಂತೆ ಕನಿಷ್ಠ ಪ್ರೌಢ ಶಾಲಾ ಶಿಕ್ಷಣ ಅಗತ್ಯವಾಗಿದೆ ಮತ್ತು ವಿದೇಶಿಯರನ್ನು ಮದುವೆಯಾದ ಮಹಿಳೆಯರಿಗೆ ಸೇನೆ ಸೇರಲು ನಿರ್ಬಂಧಿಸಲಾಗಿದೆ.
ಇದಕ್ಕೂ ಮುನ್ನ ಕಳೆದ ವರ್ಷ 100 ಮಹಿಳೆಯರನ್ನು ಸಾರ್ವಜನಿಕ ನೋಟರಿಗಳಾಗಿ ನೇಮಕ ಮಾಡಲಾಗಿತ್ತು. ಶೀಘ್ರದಲ್ಲೇ ಮಹಿಳೆಯರನ್ನು ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಿಸಲು ಅಲ್ಲಿನ ವ್ಯವಸ್ಥೆಯು ಯೋಜಿಸಿದೆ.
ಪುರುಷ ಕೇಂದ್ರೀತವಾಗಿಯೇ ಇದ್ದ ಪ್ರಮುಖ ಕ್ಷೇತ್ರಗಳಲ್ಲಿ ಮಹಿಳೆಯರನ್ನು ನೇಮಿಸುವ ಮೂಲಕ ಮಹತ್ವದ ಹೆಜ್ಜೆಗಳನ್ನು ಇಡಲು ಅಲ್ಲಿನ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಮುಕ್ತವಾಗಿ ಪ್ರೋತ್ಸಾಹಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.