ನವದೆಹಲಿ: ವಿಶ್ವಕ್ಕೆ ಕೊರೋನಾ ಲಸಿಕೆಯನ್ನು ಕಳುಹಿಸಿಕೊಡುವ ಮಹತ್ಕಾರ್ಯವನ್ನು ಭಾರತ ನಿರಂತರವಾಗಿದೆ ಮಾಡುತ್ತಿದೆ. ಈ ಮೂಲಕ ಮಹಾಮಾರಿ ಕೊರೋನಾವೈರಸ್ನಿಂದ ಕೇವಲ ತನ್ನ ಜನರನ್ನು ಮಾತ್ರವಲ್ಲ ಇತರ ದೇಶದ ಜನರನ್ನೂ ಉಳಿಸುವ ಕಾರ್ಯವನ್ನು ಮಾಡುತ್ತಿದೆ.
ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತವು 13 ಪೆಟ್ಟಿಗೆಗಳ ಕೋವಿಡ್-19 ಲಸಿಕೆಯನ್ನು ಮಂಗೋಲಿಯಾಕ್ಕೆ ಕಳುಹಿಸಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಸಿಎಸ್ಎಂಐಎ) ನಿನ್ನೆ ಮಂಗೋಲಿಯಾಕ್ಕೆ ಲಸಿಕೆ ಕಳುಹಿಸಲಾಗಿದೆ.
ಈ ನಡುವೆ, ವಿಶ್ವದಾದ್ಯಂತ 25 ರಾಷ್ಟ್ರಗಳು ಈಗಾಗಲೇ ಮೇಡ್ ಇನ್ ಇಂಡಿಯಾ ಲಸಿಕೆಗಳನ್ನು ಸ್ವೀಕರಿಸಿವೆ ಮತ್ತು ಯುರೋಪ್, ಲ್ಯಾಟಿನ್ ಅಮೆರಿಕ ಮತ್ತು ಮುಂದಿನ ದಿನಗಳಲ್ಲಿ ಕೆರಿಬಿಯನ್ ನಿಂದ ಆಫ್ರಿಕಾ, ಆಗ್ನೇಯವರೆಗೆ, ಏಷ್ಯಾ ಮತ್ತು ಪೆಸಿಫಿಕ್ ದ್ವೀಪಗಳು ಸೇರಿಂದತೆ ಇನ್ನೂ 49 ದೇಶಗಳಿಗೆ ಲಸಿಕೆ ಸರಬರಾಜು ಮಾಡಲಾಗುವುದು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರಕಟಿಸಿದ್ದಾರೆ .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.