ಬೆಂಗಳೂರು: ಸ್ಥಳೀಯ ಆಟಿಕೆ ತಯಾರಕರಿಗೆ, ಮಾರಾಟಗಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ʼದಿ ಇಂಡಿಯಾ ಟಾಯ್ ಫೇರ್ʼ ವರ್ಚುವಲ್ ಪ್ರದರ್ಶನವನ್ನು ಹಮ್ಮಿಕೊಂಡಿದೆ.
ಸಂಪೂರ್ಣ ಆನ್ಲೈನ್ ವ್ಯವಸ್ಥೆಯಲ್ಲಿ ಫೆ. 27 ರಿಂದ ಮಾ. 2 ರ ವರೆಗೆ ಈ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನದ ಉಸ್ತುವಾರಿಯನ್ನು ಎಕ್ಸ್ಪೋರ್ಟ್ ಪ್ರೊಮೋಷನ್ ಕೌನ್ಸಿಲ್ ಫಾರ್ ಹ್ಯಾಂಡಿಕ್ರಾಫ್ಟ್ಸ್ ಮತ್ತು ಡಿಸಿಎಚ್ ಸಂಸ್ಥೆಗಳು ವಹಿಸಿಕೊಳ್ಳಲಿವೆ. ಇದರಲ್ಲಿ ಸ್ಥಳೀಯ ಗೊಂಬೆ ತಯಾರಕರೂ ಭಾಗವಹಿಸಲು ಅವಕಾಶ ನೀಡಲಾಗಿದೆ.
ದೇಶದಲ್ಲಿ ಚೀನಾ ಬೊಂಬೆಗಳ ಬಳಕೆ ಕಡಿಮೆ ಮಾಡಿ, ಸ್ವದೇಶೀ ಬೊಂಬೆಗಳ ಉತ್ಪಾದನೆಗೆ ಉತ್ತೇಜನ ನೀಡಲು ಈ ಪ್ರದರ್ಶನ ಜಾರಿಗೊಳಿಸಲಾಗಿದೆ. ಇತ್ತೀಚೆಗೆ ರಾಮನಗರದ ಚನ್ನಪಟ್ಟಣದ ರೈಲು ನಿಲ್ದಾಣದಲ್ಲಿ ಬೊಂಬೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಇದಾದ ಬಳಿಕ ವರ್ಚುವಲ್ ಮೂಲಕ ಒಂದು ವಾರಗಳ ಕಾಲ ಬೊಂಬೆಗಳ ಪ್ರದರ್ಶನ ಮಾರಾಟಕ್ಕೆ ಅವಕಾಶ ನೀಡಲಾಗುತ್ತಿದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಈ ಪ್ರದರ್ಶನಕ್ಕೆ ಚನ್ನಪಟ್ಟಣದಿಂದ 16 ಮಂದಿ ಮತ್ತು ಕಿನ್ನಾಳದಿಂದ 11 ಮಂದಿ ಬೊಂಬೆ ತಯಾರಕರು, ಮಾರಾಟಗಾರರನ್ನು ಆಯ್ಕೆ ಮಾಡಲಾಗಿದೆ. ಇವರಿಗೆ ವರ್ಚುವಲ್ ಪ್ರದರ್ಶನದ ಬಗ್ಗೆ ಮಾಹಿತಿಯನ್ನೂ, ತರಬೇತಿಯನ್ನೂ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.