ಮಂಗಳೂರು: ಆರ್.ಎಸ್.ಎಸ್.ನ ಹಿರಿಯ ಪ್ರಚಾರಕರಾದ ನಾ. ಕೃಷ್ಣಪ್ಪನವರು ಇಂದು ಬೆಳಿಗ್ಗೆ ಬೆಂಗಳೂರಿನ ಆರ್.ಎಸ್.ಎಸ್. ಕೇಂದ್ರ ಕಚೇರಿ ಕೇಶವ ಕೃಪಾದಲ್ಲಿ ಸ್ವರ್ಗಸ್ಥರಾದರು.
ಕಳೆದ 61 ವರ್ಷಗಳಿಂದ ಆರ್.ಎಸ್.ಎಸ್. ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದ ಇವರು 1959ರಲ್ಲಿ ಮಂಗಳೂರು ಜಿಲ್ಲಾ ಪ್ರಚಾರಕರಾಗಿ, 1966 ರಿಂದ ಮಂಗಳೂರು ವಿಭಾಗ ಪ್ರಚಾರಕರಾಗಿ ಹಾಗೂ 1975ರಲ್ಲಿ ತುರ್ತು ಪರಿಸ್ಥಿತಿಯಲ್ಲಿ ಮಂಗಳೂರು ಜೈಲು ವಾಸ ಅನುಭವಿಸಿದ್ದರು. ಕರ್ನಾಟಕದಲ್ಲಿ ಸಂಘದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
ಮೃತರ ನಿಧನಕ್ಕೆ ಬಿಜೆಪಿ ಪ್ರಮುಖರಾದ ಸಂಸದ ನಳಿನ್ ಕುಮಾರ್ ಕಟೀಲು, ಕ್ಯಾ.ಗಣೇಶ್ ಕಾರ್ಣಿಕ್, ಎಸ್.ಅಂಗಾರ, ಪ್ರತಾಪಸಿಂಹ ನಾಯಕ್, ಸಂಜೀವ ಮಠಂದೂರು, ಕಿಶೋರ್ ರೈ, ಶೈಲಜಾ ಕೆ.ಟಿ.ಭಟ್, ಮಾಜಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್, ನಾಗರಾಜ್ ಶೆಟ್ಟಿ, ಎನ್.ಯೋಗೀಶ್ ಭಟ್, ಮೋನಪ್ಪ ಭಂಡಾರಿ ಮುಂತಾದ ಪ್ರಮುಖರು ತೀವ್ರ ಸಂತಾಪ ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.