ನವದೆಹಲಿ: 2024 ರ ವೇಳೆಗೆ ಪ್ರತಿ ಗ್ರಾಮೀಣ ಕುಟುಂಬಗಳಿಗೆ ಟ್ಯಾಪ್ ನೀರಿನ ಸಂಪರ್ಕವನ್ನು ಒದಗಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು 2019 ರ ಆಗಸ್ಟ್ 15 ರಂದು ಅನುಷ್ಠಾನಕ್ಕೆ ತಂದ ಜಲ ಜೀವನ್ ಮಿಷನ್ 3.53 ಕೋಟಿ ಗ್ರಾಮೀಣ ಮನೆಗಳಿಗೆ ಪೈಪ್ ನೀರಿನ ಸಂಪರ್ಕವನ್ನು ಒದಗಿಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.
ಆಗಸ್ಟ್ 15, 2019 ರಂದು 18.93 ಕೋಟಿ ಗ್ರಾಮೀಣ ಕುಟುಂಬಗಳ ಪೈಕಿ 3.23 ಕೋಟಿ (17%) ಜನರು ಟ್ಯಾಪ್ ನೀರಿನ ಸಂಪರ್ಕವನ್ನು ಹೊಂದಿದ್ದರು. ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳ ನಿರಂತರ ಪ್ರಯತ್ನಗಳಿಂದಾಗಿ ಜಲ್ ಜೀವನ್ ಮಿಷನ್ ಅಡಿಯಲ್ಲಿ 3.53 ಕೋಟಿ ಟ್ಯಾಪ್ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ. ಇದಲ್ಲದೆ, 52 ಜಿಲ್ಲೆಗಳು ಮತ್ತು 77 ಸಾವಿರ ಹಳ್ಳಿಗಳಲ್ಲಿ ವಾಸಿಸುವ ಪ್ರತಿ ಕುಟುಂಬವು ತಮ್ಮ ಮನೆಗಳಿಗೆ ಖಚಿತ ಟ್ಯಾಪ್ ನೀರು ಸರಬರಾಜು ಪಡೆಯುತ್ತಿವೆ . ಈಗ 6.76 ಕೋಟಿ (35.24%) ಅಂದರೆ 1/3 ಕ್ಕಿಂತ ಹೆಚ್ಚು ಗ್ರಾಮೀಣ ಕುಟುಂಬಗಳು ಟ್ಯಾಪ್ಗಳ ಮೂಲಕ ಕುಡಿಯುವ ನೀರನ್ನು ಪಡೆಯುತ್ತಿವೆ.
ಗೋವಾ 100% ಟ್ಯಾಪ್ ವಾಟರ್ ಸಂಪರ್ಕವನ್ನು ಒದಗಿಸಿದ ದೇಶದ ಮೊದಲ ರಾಜ್ಯವಾಗಿದೆ ಮತ್ತು ನಂತರ ತೆಲಂಗಾಣ. ರಾಜ್ಯಗಳು / ಯುಟಿಗಳು ಈಗ ಪರಸ್ಪರ ಪೈಪೋಟಿ ನಡೆಸುತ್ತಿವೆ ಮತ್ತು ದೇಶದ ಪ್ರತಿಯೊಂದು ಮನೆಯೂ ಸುರಕ್ಷಿತ ಕುಡಿಯುವ ನೀರನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಗುರಿಯತ್ತ ಗಮನ ಹರಿಸುತ್ತಿವೆ.
ಜಲ್ ಜೀವನ್ ಮಿಷನ್ ರಾಜ್ಯಗಳ ಸಹಭಾಗಿತ್ವದಲ್ಲಿ ಕುಡಿಯುವ ನೀರನ್ನು ಸಮರ್ಪಕ ಪ್ರಮಾಣದಲ್ಲಿ ಮತ್ತು ನಿಗದಿತ ಗುಣಮಟ್ಟವನ್ನು ನಿಯಮಿತ ಮತ್ತು ದೀರ್ಘಕಾಲೀನ ಆಧಾರದ ಮೇಲೆ ಒದಗಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.