ನವದೆಹಲಿ: ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕಾಗಿ ಅಂಬೇಡ್ಕರ್ ಮಹಾಸಭಾ ಟ್ರಸ್ಟ್ ಬೆಳ್ಳಿ ಇಟ್ಟಿಗೆಯನ್ನು ದಾನ ಮಾಡಿದೆ.
“ನಾವು ರಾಮ ಮಂದಿರ ಟ್ರಸ್ಟ್ಗೆ ಬೆಳ್ಳಿ ಇಟ್ಟಿಗೆಯನ್ನು ದಾನ ಮಾಡಿದ್ದೇವೆ. ಭಗವಾನ್ ರಾಮ ದಲಿತರ ನಂಬಿಕೆಯ ಕೇಂದ್ರ ಎಂಬ ಸಂದೇಶವನ್ನು ನಾವು ಕಳುಹಿಸುತ್ತಿದ್ದೇವೆ. ರಾಮ ಹದಿನಾಲ್ಕು ವರ್ಷಗಳ ವನವಾಸಕ್ಕೆ ಅರಣ್ಯಕ್ಕೆ ಹೋದಾಗ ಆದಿವಾಸಿಗಳು ರಾಮನೊಂದಿಗೆ ಇದ್ದರು. ರಾಮನಿಗಾಗಿ ಅಯೋಧ್ಯೆಯಲ್ಲಿ ದೊಡ್ಡ ಭವ್ಯವಾದ ಮಂದಿರ ನಿರ್ಮಾಣ ಆಗಬೇಕು ಎಂಬುದು ನಮ್ಮ ಆಶಯ” ಎಂದು ಅಂಬೇಡ್ಕರ್ ಮಹಾಸಭಾ ಟ್ರಸ್ಟ್ ಅಧ್ಯಕ್ಷ ಡಾ. ಲಾಲ್ಜಿ ಪ್ರಸಾದ್ ನಿರ್ಮಲಾ ಹೇಳಿದ್ದಾರೆ.
ದೇವಾಲಯದ ನಿರ್ಮಾಣದ ಮೇಲ್ವಿಚಾರಣೆ ನಡೆಸುತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಅವರು, ಅಂಬೇಡ್ಕರ್ ಮಹಾಸಭಾ ರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ ದಾನ ಮಾಡಿದ್ದನ್ನು ಸ್ವಾಗತಿಸಿದರು, ಜನರು ಟ್ರಸ್ಟ್ಗೆ ಪೂರ್ಣ ಹೃದಯದಿಂದ ದೇಣಿಗೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ದೇವಾಲಯದ ಟ್ರಸ್ಟ್ ಜನವರಿ 14 ರಿಂದ ಫೆಬ್ರವರಿ 27 ರವರೆಗೆ ಹಣ ಸಂಗ್ರಹಿಸುವ ಅಭಿಯಾನವನ್ನು ನಡೆಸುತ್ತಿದೆ.
ಈ ಪ್ರಯತ್ನದಲ್ಲಿ ಐದು ಲಕ್ಷಕ್ಕೂ ಹೆಚ್ಚು ಗ್ರಾಮಗಳ 12 ಕೋಟಿ ಹಿಂದೂ ಕುಟುಂಬಗಳ 55 ಕೋಟಿ ಕುಟುಂಬ ಸದಸ್ಯರನ್ನು ಒಳಗೊಳ್ಳಲು ಟ್ರಸ್ಟ್ ಯೋಜಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.