ನವದೆಹಲಿ: ಅತಿ ಹೆಚ್ಚು ಕೋವಿಡ್-19 ಲಸಿಕೆ ಡೋಸ್ ಅನ್ನು ನೀಡಿದ ವಿಶ್ವದ ಅತಿ ವೇಗದ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಲವಾದ ನಾಯಕತ್ವದಲ್ಲಿ 7 ಮಿಲಿಯನ್ ಕೋವಿಡ್ ಲಸಿಕೆಗಳನ್ನು ನೀಡುವ ಮೂಲಕ ದೇಶವು ವಿಶ್ವದ ಅತಿ ವೇಗದ ದೇಶವಾಗಿ ಹೊರಹೊಮ್ಮಿದೆ ಎಂದು ಗುರುವಾರ ಭಾರತ ಸರ್ಕಾರ ಟ್ವೀಟ್ ಮಾಡಿ ಘೋಷಿಸಿದೆ.
ಲಸಿಕಾ ಅಭಿಯಾನದ 27ನೇ ದಿನ, ಕೋವಿಡ್-19 ವಿರುದ್ಧ ಲಸಿಕೆ ಪಡೆದ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರ ಸಂಖ್ಯೆ ದೇಶಾದ್ಯಂತ 74.30 ಲಕ್ಷಗಳನ್ನು ತಲುಪಿದೆ.
ಆರೋಗ್ಯ ಮತ್ತು ಕಲ್ಯಾಣ ಸಚಿವಾಲಯದ ಪ್ರಕಾರ, ಯುಎಸ್ ಮತ್ತು ಬ್ರಿಟನ್ ಈ ಸಂಖ್ಯೆಯನ್ನು ಸಾಧಿಸಲು ಕ್ರಮವಾಗಿ 27 ಮತ್ತು 48 ದಿನಗಳನ್ನು ತೆಗೆದುಕೊಂಡಿದೆ. ಆದರೆ ಭಾರತ ಇದನ್ನು ಸಾಧಿಸಲು ಕೇವಲ 26 ದಿನಗಳನ್ನು ತೆಗೆದುಕೊಂಡಿದೆ. ರಾಷ್ಟ್ರವ್ಯಾಪಿ ನಡೆಯುತ್ತಿರುವ ಅತಿದೊಡ್ಡ ವ್ಯಾಕ್ಸಿನೇಷನ್ ಕಾರ್ಯಕ್ರಮದಡಿ ಈ ಸಾಧನೆ ಮಾಡಲಾಗಿದೆ
ಯುಕೆ ಮತ್ತು ಯುಎಸ್ ಎರಡೂ ಡಿಸೆಂಬರ್ನಲ್ಲಿ ತಮ್ಮ ಮಹತ್ವಾಕಾಂಕ್ಷೆಯ ಇನಾಕ್ಯುಲೇಷನ್ ಡ್ರೈವ್ಗಳನ್ನು ಪ್ರಾರಂಭಿಸಿದವು. ಭಾರತ ಜನವರಿಯಲ್ಲಿ ಪ್ರಾರಂಭಿಸಿತು.
ಭಾರತದಲ್ಲಿ ಎಲ್ಲಾ ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ, ಫೆಬ್ರವರಿ 11 ರಂದು ಒಟ್ಟು 4,13,752 ಫಲಾನುಭವಿಗಳಿಗೆ ಸಂಜೆ 7:00 ರವರೆಗೆ ಲಸಿಕೆ ನೀಡಲಾಯಿತು. ಈ ಪೈಕಿ 85,604 ಮಂದಿ ಆರೋಗ್ಯ ಸೇವಕರಾಗಿದ್ದರೆ, ಉಳಿದ 3,28,148 ಫಲಾನುಭವಿಗಳು ಮುಂಚೂಣಿ ಕೆಲಸಗಾರರಾಗಿದ್ದಾರೆ. ಆರೋಗ್ಯ ಮತ್ತು ಕಲ್ಯಾಣ ಸಚಿವಾಲಯವು ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ಸರ್ಕಾರವು ಬಿಡುಗಡೆ ಮಾಡಿದ ಡೇಟಾವನ್ನು ಹಂಚಿಕೊಂಡಿದೆ. ಅಂಕಿಅಂಶಗಳ ಪ್ರಕಾರ, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಮತ್ತು ರಾಜಸ್ಥಾನಗಳು ಕಳೆದ 27 ದಿನಗಳಲ್ಲಿ ಅತಿ ಹೆಚ್ಚು ವ್ಯಾಕ್ಸಿನೇಷನ್ ದಾಖಲಿಸಿರುವ ಭಾರತೀಯ ರಾಜ್ಯಗಳಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.