ನವದೆಹಲಿ: ಪ್ರಸಕ್ತ ಖಾರಿಫ್ ಮಾರ್ಕೆಟಿಂಗ್ ಋತುವಿನಲ್ಲಿ ಸರ್ಕಾರವು 620 ಲಕ್ಷ ಟನ್ಗಳಿಗೂ ಹೆಚ್ಚು ಭತ್ತವನ್ನು ಖರೀದಿ ಮಾಡಿದೆ.
ಕೃಷಿ ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇಕಡಾ 17.60 ರಷ್ಟು ಖರೀದಿ ಹೆಚ್ಚಳವಾಗಿದ್ದು, ಸುಮಾರು 620 ಲಕ್ಷ ಟನ್ ಖರೀದಿ ನಡೆದಿದೆ. ಒಟ್ಟು ಖರೀದಿಯ ಪೈಕಿ, ಪಂಜಾಬ್ ಒಂದೇ 202 ಲಕ್ಷ ಟನ್ ಕೊಡುಗೆ ನೀಡಿದೆ, ಇದು ಒಟ್ಟು ಖರೀದಿಯ ಶೇಕಡಾ 32.71 ಆಗಿದೆ.
ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ತೆಲಂಗಾಣ, ಉತ್ತರಾಖಂಡ, ತಮಿಳುನಾಡು, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಕೇರಳ, ಗುಜರಾತ್, ಆಂಧ್ರಪ್ರದೇಶ,ಮಧ್ಯಪ್ರದೇಶ, ಮಹಾರಾಷ್ಟ್ರ, ಬಿಹಾರ, ಜಾರ್ಖಂಡ್, ಅಸ್ಸಾಂ, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ತ್ರಿಪುರ, ಛತ್ತೀಸ್ಗಢ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭತ್ತದ ಖರೀದಿ ಸುಗಮವಾಗಿ ಮುಂದುವರೆದಿದೆ ಎಂದು ಸಚಿವಾಲಯ ತಿಳಿಸಿದೆ.
ಸಂಗ್ರಹಿಸಿದ ಭತ್ತದ ಪ್ರಮಾಣಕ್ಕೆ ಕನಿಷ್ಠ ಬೆಂಬಲ ಬೆಲೆ, ಎಂಎಸ್ಪಿ ಮೌಲ್ಯವು ಒಂದು ಲಕ್ಷ 17 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.