ನವದೆಹಲಿ: ಭಾರತದಲ್ಲಿ ಇಂಗ್ಲೀಷ್ ವ್ಯಾಪಕವಾಗಿ ಹಬ್ಬಿದ್ದರೂ ಇಂದಿಗೂ ಹಲವಾರು ವಿದ್ಯಾರ್ಥಿಗಳು ಇಂಗ್ಲೀಷ್ ಭಾಷಾ ಕೌಶಲ್ಯವಿಲ್ಲದೆ ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ. ತಮ್ಮಲ್ಲಿ ಕೀಳರಮೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇಂಜಿನೀಯರಿಂಗ್ ವಿದ್ಯಾರ್ಥಿಗಳೂ ಇದರಿಂದ ಹೊರತಾಗಿಲ್ಲ.
ದೇಶದ ಶೇ.97ರಷ್ಟು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂಗ್ಲೀಷ್ನಲ್ಲಿ ಮಾತನಾಡುವ ಸಾಮರ್ಥ್ಯವಿಲ್ಲ ಎಂಬುದನ್ನು ನೂತನ ಸಮೀಕ್ಷೆ ತಿಳಿಸಿದೆ.
ಇಂಗ್ಲೀಷ್ ಭಾಷೆಯ ಕೊರತೆಯಿಂದಾಗಿಯೇ ಶೇ.50ರಷ್ಟು ಎಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗವಕಾಶಗಳು ಸಿಗುತ್ತಿಲ್ಲ. ಶೇ.61ರಷ್ಟು ಎಂಜಿನಿಯರ್ಗಳ ಇಂಗ್ಲೀಷ್ ಗ್ರಾಮರ್ 7ನೇ ತರಗತಿಯ ವಿದ್ಯಾರ್ಥಿಗಳಿಗಿಂತಲೂ ಕೆಟ್ಟದಾಗಿದೆ.
ಶೇ.7.1ರಷ್ಟು ಎಂಜಿನಿಯರ್ಗಳು ಸರಾಗವಾಗಿ ಇಂಗ್ಲೀಷ್ ಮಾತನಾಡುತ್ತಾರೆ. ಮಹಿಳೆಯರ ಇಂಗ್ಲೀಷ್ ಬರವಣಿಗೆ ಪುರುಷರಿಗಿಂತ ಉತ್ತಮವಾಗಿದೆ. ಪುರುಷರ ಮಾತನಾಡುವ ಸಾಮರ್ಥ್ಯ ಉತ್ತಮವಾಗಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.
ದೇಶದ 500 ಎಂಜಿನಿಯರಿಂಗ್ ಕಾಲೇಜುಗಳ 30 ಸಾವಿರ ವಿದ್ಯಾರ್ಥಿಗಳನ್ನು ಸಮೀಕ್ಷೆಗೊಳಪಡಿಸಲಾಗಿದೆ. ದೆಹಲಿ, ಬೆಂಗಳೂರು, ಮುಂಬಯಿಯಲ್ಲಿ ಎಂಜಿನಿಯರ್ಗಳ ಇಂಗ್ಲೀಷ್ ಸಾಮರ್ಥ್ಯ ಉತ್ತಮವಾಗಿದೆ. ಹೈದರಬಾದ್ ಮತ್ತು ಚೆನ್ನೈನ ವಿದ್ಯಾರ್ಥಿಗಳು ಇಂಗ್ಲೀಷ್ನ್ನು ಮತ್ತಷ್ಟು ಉತ್ತಮಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.
ಇಂಗ್ಲೀಷ್ ಕಾರ್ಪೋರೇಟ್ ಸೇಲ್ಸ್ ಮತ್ತು ಬ್ಯುಸಿನೆಸ್ ಕನ್ಸಲ್ಟಿಂಗ್ಗೆ ಅತ್ಯವಶ್ಯಕವಾಗಿರುವ ಕಾರಣ ಇಂಗ್ಲೀಷ್ ಪರಿಣಿತಿ ಇಲ್ಲದವರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಅಥವಾ ಇಂಗ್ಲೀಷ್ ಸಾಮರ್ಥ್ಯವಿರುವ ವಿದ್ಯಾರ್ಥಿಗಳಿಗಿಂತ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.