ನವದೆಹಲಿ: ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಗೌರವಾರ್ಥ ಕೇಂದ್ರ ಶಿಕ್ಷಣ ಯೋಜನೆಯಡಿ ಧನಸಹಾಯ ಹೊಂದಿರುವ ವಸತಿ ಶಾಲೆಗಳು ಮತ್ತು ವಸತಿ ನಿಲಯಗಳನ್ನು “ನೇತಾಜಿ ಸುಭಾಸ್ ಚಂದ್ರ ಬೋಸ್ ವಸತಿ ಶಾಲೆಗಳು / ವಸತಿ ನಿಲಯಗಳು” ಎಂದು ಹೆಸರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಶಿಕ್ಷಣ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರೊಂದಿಗಿನ ಈ ಶಾಲೆಗಳ ಬೆಸುಗೆ ಮಕ್ಕಳಿಗೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಶಿಕ್ಷಕರು, ಸಿಬ್ಬಂದಿ ಮತ್ತು ಆಡಳಿತಕ್ಕೆ ಉನ್ನತ ಮಟ್ಟದ ಶ್ರೇಷ್ಠತೆಯನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಇಲ್ಲಿಯವರೆಗೆ, ಒಟ್ಟು 1063 ವಸತಿ ಸೌಲಭ್ಯಗಳನ್ನು (383 ವಸತಿ ಶಾಲೆಗಳು ಮತ್ತು 680 ಹಾಸ್ಟೆಲ್ಗಳು) ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಂಜೂರು ಮಾಡಲಾಗಿದೆ. ಇದರಲ್ಲಿ 12 ಶಾಲೆಗಳು ಮತ್ತು 19 ಹಾಸ್ಟೆಲ್ಗಳು ಪಶ್ಚಿಮ ಬಂಗಾಳದ ಸಮೀಕ್ಷೆಯಲ್ಲಿವೆ.
ಶಿಕ್ಷಣ ಸಚಿವಾಲಯವು ಸಮಗ್ರ ಶಿಕ್ಷಣದಡಿ ರಾಜ್ಯಗಳ ಮತ್ತು ಕೇಂದ್ರಾಡಳಿತಗಳ ಗುಡ್ಡಗಾಡು ಪ್ರದೇಶ, ಸಣ್ಣ ಮತ್ತು ವಿರಳ ಜನಸಂಖ್ಯೆಯ ಪ್ರದೇಶಗಳಲ್ಲಿ ವಸತಿ ಶಾಲೆಗಳು ಮತ್ತು ಹಾಸ್ಟೆಲ್ಗಳನ್ನು ತೆರೆಯಲು ಮತ್ತು ನಡೆಸಲು ಹಣಕಾಸಿನ ನೆರವು ನೀಡುತ್ತದೆ.
ಶಾಲೆಗಳು ತೆರೆಯುವುದು ಕಾರ್ಯಸಾಧ್ಯವಾಗದಿರುವಂತಹ ಕಡಿಮೆ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಮತ್ತು ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ನಗರ ಪ್ರದೇಶಗಳಲ್ಲಿನ ಮಕ್ಕಳಿಗೆ ಸಾರ್ವತ್ರಿಕ ದಾಖಲಾತಿಯನ್ನು ಖಚಿತಪಡಿಸುವುದು ಮತ್ತು ಶಾಲಾ ಸೌಲಭ್ಯಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ.
ಈ ವಸತಿ ಶಾಲೆಗಳು ಮತ್ತು ಹಾಸ್ಟೆಲ್ಗಳಲ್ಲಿ, ನಿಯಮಿತ ಶಾಲಾ ಪಠ್ಯಕ್ರಮದ ಜೊತೆಗೆ, ನಿರ್ದಿಷ್ಟ ಕೌಶಲ್ಯ ತರಬೇತಿ, ದೈಹಿಕ ಸ್ವರಕ್ಷಣೆ, ವೈದ್ಯಕೀಯ ಆರೈಕೆ, ಸಮುದಾಯ ಭಾಗವಹಿಸುವಿಕೆ ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.