ಟೆಹ್ರಾನ್: ಇರಾನ್ನ ಇಲೈಟ್ ರೆವಲ್ಯೂಷನರಿ ಗಾರ್ಡ್ಸ್ (ಐಆರ್ಜಿಸಿ) ಈ ವಾರದ ಆರಂಭದಲ್ಲಿ ಪಾಕಿಸ್ಥಾನದ ಭೂಪ್ರದೇಶದೊಳಗೆ ಸರ್ಜಿಕಲ್ ಕಾರ್ಯಾಚರಣೆಯನ್ನು ನಡೆಸಿದ್ದು, ಅಲ್ಲಿದ್ದ ತನ್ನ ಇಬ್ಬರು ಸೈನಿಕರನ್ನು ಯಶಸ್ವಿಯಾಗಿ ಪಾರು ಮಾಡಿದೆ. ವರದಿಯ ಪ್ರಕಾರ, ಈ ಸೈನಿಕರನ್ನು ಎರಡೂವರೆ ವರ್ಷಗಳ ಹಿಂದೆ ಜೈಶ್ ಉಲ್-ಆಡ್ಲ್ ಸಂಘಟನೆಯು ಒತ್ತೆಯಾಳುಗಳಾಗಿ ವಶಪಡಿಸಿಕೊಂಡಿತ್ತು.
“ಎರಡೂವರೆ ವರ್ಷಗಳ ಹಿಂದೆ ಜೈಶ್ ಉಲ್-ಆಡ್ಲ್ ಸಂಘಟನೆಯು ಒತ್ತೆಯಾಳುಗಳಾಗಿ ಇಟ್ಟುಕೊಂಡ ಇಬ್ಬರು ಅಪಹರಣಕ್ಕೊಳಗಾದ ಗಡಿ ಕಾವಲುಗಾರರನ್ನು ರಕ್ಷಿಸಲು ಕಳೆದ ಮಂಗಳವಾರ ರಾತ್ರಿ ಯಶಸ್ವಿ ಕಾರ್ಯಾಚರಣೆ ನಡೆಸಲಾಯಿತು” ಎಂದು ಐಆರ್ಜಿಸಿ ಬುಧವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಸೈನಿಕರನ್ನು ಇರಾನ್ಗೆ ವರ್ಗಾಯಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಉಭಯ ದೇಶಗಳ ಗಡಿಯಲ್ಲಿ ಜೈಶ್ ಉಲ್-ಆಡ್ಲ್ ಸಂಘಟನೆ ಹನ್ನೆರಡು ಐಆರ್ಜಿಸಿ ಸೈನಿಕರನ್ನು ಅಪಹರಿಸಿತ್ತು. ಸಿಸ್ತಾನ್ ಮತ್ತು ಬಲೂಚೆಸ್ತಾನ್ ಪ್ರಾಂತ್ಯದ ಮೆರ್ಕವಾ ನಗರದೊಳಗೆ ಇವರನ್ನು ಅಪಹರಿಸಲಾಗಿತ್ತು.
12 ಸೈನಿಕರಲ್ಲಿ ಐವರನ್ನು ನವೆಂಬರ್ 2018 ರಲ್ಲಿ ಬಿಡುಗಡೆ ಮಾಡಲಾಗಿದೆ, ಪಾಕಿಸ್ಥಾನ ಸೇನೆಯು 2019 ರ ಮಾರ್ಚ್ 21 ರಂದು ನಾಲ್ವರನ್ನು ರಕ್ಷಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ವರದಿಯ ಪ್ರಕಾರ, ಜೈಷ್ ಉಲ್-ಆಡ್ಲ್ ಅನ್ನು ಟೆಹ್ರಾನ್ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ, ಈ ಸಂಸ್ಥೆ ಇರಾನಿ ಸರ್ಕಾರದ ವಿರುದ್ಧ ಸಶಸ್ತ್ರ ಹೋರಾಟವನ್ನು ನಡೆಸುತ್ತಿದೆ ಎಂದು ಹೇಳಲಾಗಿದೆ.
2000 ರಿಂದ ಇರಾನ್ ವಿರುದ್ಧದ ದಂಗೆಯ ಹಿಂದೆ ಇರುವ ಜುಂಡಲ್ಲಾದ ಮರು ಸೃಷ್ಟಿ ಎಂದು ಜೈಷ್ ಉಲ್-ಅಡ್ಲ್ ಅನ್ನು ನಂಬಲಾಗಿದೆ. 2012 ರಲ್ಲಿ ಸಲಾಹುದ್ದೀನ್ ಫಾರೂಕಿ ಸ್ಥಾಪಿಸಿದ ಈ ಸಂಸ್ಥೆ 2017 ರ ಅಕ್ಟೋಬರ್ನಲ್ಲಿ 12 ಇರಾನಿನ ಸಿಬ್ಬಂದಿಯನ್ನು ಅಪಹರಿಸಿದೆ.
ಈ ಗುಂಪು ಸ್ಥಾಪನೆಯಾದಾಗಿನಿಂದ ಇರಾನ್ನೊಂದಿಗೆ ಸಶಸ್ತ್ರ ಸಂಘರ್ಷದ ಸುದೀರ್ಘ ಇತಿಹಾಸವನ್ನು ಹೊಂದಿದೆ. ಅಕ್ಟೋಬರ್ 2013 ರಲ್ಲಿ 14 ಇರಾನಿನ ಸೈನಿಕರನ್ನು ಜೈಶ್ ಉಲ್-ಆಡ್ಲ್ ಕೊಂದಿದೆ. ಇರಾನ್ನಲ್ಲಿ ಬಲೂಚ್ ಸುನ್ನಿಯರ ಹಕ್ಕುಗಳನ್ನು ರಕ್ಷಿಸುತ್ತಿರುವುದಾಗಿ ಗುಂಪು ಹೇಳಿಕೊಂಡಿದೆ. 2014 ರ ಫೆಬ್ರವರಿಯಲ್ಲಿ ಐದು ಇರಾನಿನ ಸೈನಿಕರನ್ನು ಅಪಹರಿಸಿ ಪಾಕಿಸ್ಥಾನದೊಳಗೆ ಕರೆದೊಯ್ಯದಿದೆ. ಇರಾನ್ ತನ್ನ ಸಿಬ್ಬಂದಿಯನ್ನು ರಕ್ಷಿಸಲು ಸೈನ್ಯವನ್ನು ಕಳುಹಿಸುವುದಾಗಿ ಎಚ್ಚರಿಸಿತ್ತ. ಅದರಂತೆ ಸರ್ಜಿಕಲ್ ಅಪರೇಶನ್ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.