ನವದೆಹಲಿ: ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ವಿದೇಶಿ ವ್ಯಕ್ತಿಗಳ ಪ್ರತಿಕ್ರಿಯೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಖಂಡಿಸಿದ್ದಾರೆ.
ಟ್ವಿಟ್ ಮಾಡಿರುವ ಗೃಹ ಸಚಿವರು, “ಯಾವುದೇ ಅಪಪ್ರಚಾರವು ಭಾರತದ ಏಕತೆಯನ್ನು ತಡೆಯಲು ಸಾಧ್ಯವಿಲ್ಲ. ಯಾವುದೇ ಅಪಪ್ರಚಾರವು ಭಾರತವನ್ನು ಹೊಸ ಎತ್ತರಕ್ಕೆ ಹೋಗುವುದನ್ನು ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
“ಅಪಪ್ರಚಾರವು ಭಾರತದ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ, ಪ್ರಗತಿ ಮಾತ್ರ ನಿರ್ಧರಿಸಬಲ್ಲದು. ಪ್ರಗತಿಯನ್ನು ಸಾಧಿಸಲು ಭಾರತವು ಒಗ್ಗಟ್ಟಿನಿಂದ ಮತ್ತು ಒಟ್ಟಾಗಿ ನಿಂತಿದೆ” ಎಂದಿದ್ದಾರೆ.
ರೈತ ಪ್ರತಿಭಟನೆ ಕುರಿತು ಅಮೆರಿಕದ ಗಾಯಕಿ ರಿಹಾನ್ನಾ ಮತ್ತು ಇತರ ಗಣ್ಯರು ಮತ್ತು ಕಾರ್ಯಕರ್ತರು ನೀಡಿದ ಹೇಳಿಕೆಯ ನಂತರ ಈ ಹೇಳಿಕೆ ಬಂದಿದೆ. ಈ ಮೊದಲು ವಿದೇಶಾಂಗ ಸಚಿವಾಲಯವು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಮುಂದಾಗುವ ಮೊದಲು ಸತ್ಯವನ್ನು ಕಂಡುಹಿಡಿಯಬೇಕು ಎಂದು ವಿದೇಶಿಗರ ವಿರುದ್ಧ ವಾಗ್ದಾಳಿ ನಡೆಸಿತ್ತು ಮತ್ತು ಸಂವೇದನಾಶೀಲ ಸಾಮಾಜಿಕ ಮಾಧ್ಯಮ ಹ್ಯಾಶ್ಟ್ಯಾಗ್ಗಳು ಮತ್ತು ಕಾಮೆಂಟುಗಳು ನಿಖರತೆ ಅಥವಾ ಜವಾಬ್ದಾರಿಯಿಂದ ಕೂಡಿಲ್ಲ ಎಂದು ಪ್ರತಿಪಾದಿಸಿತ್ತು.
No propaganda can deter India’s unity!
No propaganda can stop India to attain new heights!
Propaganda can not decide India’s fate only ‘Progress’ can.
India stands united and together to achieve progress.#IndiaAgainstPropaganda#IndiaTogether https://t.co/ZJXYzGieCt
— Amit Shah (@AmitShah) February 3, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.