ನವದೆಹಲಿ: ಜೆಫ್ ಬೆಜೋಸ್ ಅವರು ಈ ವರ್ಷದ ಕೊನೆಯಲ್ಲಿ ಅಮೆಜಾನ್ನ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯನ್ನು ತ್ಯಜಿಸುವುದಾಗಿ ಘೋಷಣೆ ಮಾಡಿದ್ದಾರೆ.
ಪ್ರಸ್ತುತ ಅಮೆಜಾನ್ನ ವೆಬ್ ಸರ್ವಿಸಸ್ ಮುಖ್ಯಸ್ಥರಾಗಿರುವ ಆಂಡಿ ಜಾಸ್ಸಿ ಅವರು ಮೂರನೇ ತ್ರೈಮಾಸಿಕದಲ್ಲಿ ಸಿಇಓ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಟೆಕ್ ಮತ್ತು ಇ-ಕಾಮರ್ಸ್ ದೈತ್ಯನಾಗಿರುವ ಅಮೆಜಾನ್ ರಾಜಾ ಕಾಲದ ತ್ರೈಮಾಸಿಕದಲ್ಲಿ ಲಾಭ ಮತ್ತು ಆದಾಯ ಎರಡರಲ್ಲೂ ಏರಿಕೆಯನ್ನು ಕಂಡಿತ್ತು. ಇದರ ಬೆನ್ನಲ್ಲೇ ಜೆಫ್ ಹುದ್ದೆಯಿಂದ ಇಳಿಯುವ ನಿರ್ಧಾರ ಮಾಡಿದ್ದಾರೆ.
57 ರ ಹರೆಯದ ಬೆಜೋಸ್ 1994 ರಲ್ಲಿ ಅಮೆಜಾನ್ ಅನ್ನು ಸ್ಥಾಪಿಸಿದರು. ಗ್ಯಾಜೆಟ್ಗಳಿಂದ ಹಿಡಿದು ದಿನಸಿ ಸಾಮಗ್ರಿಗಳವರೆಗೆ ಸ್ಟ್ರೀಮಿಂಗ್ವರೆಗೆ ವಿವಿಧ ವಿಭಾಗಗಳಲ್ಲಿ ಜಾಗತಿಕ ಮಟ್ಟದಲ್ಲಿ ಈ ಸಂಸ್ಥೆ ಇಂದು ಹೆಸರು ಮಾಡಿದೆ. ಕಳೆದ ವರ್ಷದ ಜನವರಿಯಲ್ಲಿ ಅಮೆಜಾನ್ ಜೆಫ್ ನಾಯಕತ್ವದಲ್ಲಿ 1 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಕ್ಯಾಪ್ ಅನ್ನು ಮೀರಿಸಿದೆ. ಇದರ ಮೌಲ್ಯ ಈಗ 1.6 ಟ್ರಿಲಿಯನ್ ಡಾಲರ್ಗಿಂತ ಹೆಚ್ಚಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.