ನವದೆಹಲಿ: ಭಾರತದಲ್ಲಿ ಕೋವಿಡ್ -19 ಪ್ರಕರಣಗಳು ಸ್ಥಿರವಾದ ಇಳಿಕೆಯನ್ನು ಕಾಣುತ್ತಿವೆ. ಎಂಟು ತಿಂಗಳ ನಂತರ ಮಂಗಳವಾರ ಪ್ರಕರಣಗಳ ಸಂಖ್ಯೆ ಗಮನಾರ್ಹವಾಗಿ ಇಳಿಕೆಯಾಗಿದ್ದು, 8,635 ಕ್ಕೆ ಕುಸಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
“ಸೆಪ್ಟೆಂಬರ್ 10, 2020 ರಂದು 95,735 ರ ಗರಿಷ್ಠ ಮಟ್ಟವನ್ನು ತಲುಪಿದ ನಂತರ, ಇಂದು ಕೊರೋನಾ ಪ್ರಕರಣ 8,635 ಕ್ಕೆ ಇಳಿದಿದೆ. ಇದು 8 ತಿಂಗಳಲ್ಲೇ ಕಡಿಮೆ” ಎಂದು ಸಚಿವಾಲಯ ತಿಳಿಸಿದೆ.
ಆರೋಗ್ಯ ಸಚಿವಾಲಯದ ಪ್ರಕಾರ, ಭಾರತದ ಸರಾಸರಿ ದೈನಂದಿನ ಹೊಸ ಪ್ರಕರಣಗಳು ಕಳೆದ ಐದು ವಾರಗಳಲ್ಲಿ ಸ್ಪಷ್ಟ ಕುಸಿತವನ್ನು ತೋರಿಸುತ್ತಿವೆ. 2020 ರ ಡಿಸೆಂಬರ್ 30 ರಲ್ಲಿ ಇದು 18,934 ಆಗಿತ್ತು ಮತ್ತು ಸರಾಸರಿ ದೈನಂದಿನ ಹೊಸ ಪ್ರಕರಣಗಳು ಜನವರಿ 27 ರಲ್ಲಿ 12,772 ಕ್ಕೆ ಇಳಿದಿದೆ” ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ, ದೇಶವು ಕಳೆದ 24 ಗಂಟೆಗಳಲ್ಲಿ ಕಡಿಮೆ ಎಂದರೆ 100 ದೈನಂದಿನ ಸಾವುಗಳನ್ನು ವರದಿ ಮಾಡಿದೆ. 2020 ರ ಮೇ 15 ರಂದು ಕೊನೆಯ ಬಾರಿಗೆ 100 ಸಾವುಗಳು ದಾಖಲಾಗಿತ್ತು, ಇದೀಗ ಎಂಟೂವರೆ ತಿಂಗಳ ಬಳಿಕ ಸಾಔಿನ ಪ್ರಮಾಣ ಅಷ್ಟೇ ಮಟ್ಟಿಗೆ ಇಳಿದಿದೆ.
ಕಳೆದ 24 ಗಂಟೆಗಳಲ್ಲಿ, 3,516 ಸೆಷನ್ಗಳಲ್ಲಿ 1,91,313 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಯಿತು. ಈವರೆಗೆ 72,731 ಸೆಷನ್ಸ್ ನಡೆಸಲಾಗಿದೆ.
ಪ್ರತಿದಿನ ಲಸಿಕೆ ಪಡೆಯುವ ಫಲಾನುಭವಿಗಳ ಸಂಖ್ಯೆ ಹೆಚ್ಚಳವನ್ನು ತೋರಿಸುತ್ತಿದೆ.
ಕಳೆದ 24 ಗಂಟೆಗಳಲ್ಲಿ 13,423 ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.