ನವದೆಹಲಿ: ಮಕ್ಕಳ ಜೊತೆ ಆಟವಾಡುವ ವಯಸ್ಸಿನ ಪೂರ್ವ ಜೋಶಿ, ನಾಲ್ಕು ಕ್ರೀಡೆಗಳ ನಿರಂತರ ಅಭ್ಯಾಸದಲ್ಲಿ ತೊಡಗಿದ್ದಾಳೆ, ಕತ್ತಿ ವರಸೆಯಿಂದ ಹಿಡಿದು ಆಕಾಶದಲ್ಲಿ ಹಾರುವ ಕಲೆಯೂ ಈಕೆಗೆ ಕರಗತ. ಅಷ್ಟೇ ಅಲ್ಲದೇ ಇಂಡೋರ್ ಸ್ಕೈಡೈವಿಂಗ್ನಲ್ಲಿ ಗಿನ್ನಿಸ್ ರೆಕಾರ್ಡ್ನ್ನೂ ಮಾಡಿದ್ದಾಳೆ.
ಆಕಾಶದಲ್ಲಿ ಹಾರುವುದು ಮತ್ತು ಗುರಿಯಿಟ್ಟು ಶೂಟ್ ಮಾಡುವುದು ಈಕೆಯ ಆಸಕ್ತಿ. ಅದರೊಂದಿಗೆ ಇಂಡೋರ್ ಸ್ಕೈಡೈವಿಂಗ್, ಫೆನ್ಸಿಂಗ್ ಮತ್ತು ಅಥ್ಲೇಟಿಕ್ಸ್ಗಳೂ ಇವಳಿಗೆ ಫೆವರೇಟ್. ಭವಿಷ್ಯದಲ್ಲಿ ಗಗನಯಾತ್ರಿ ಆಗಬೇಕೆಂಬುದು ಈಕೆಯ ಗುರಿ.
ದೆಹಲಿಯಲ್ಲಿ ಹುಟ್ಟಿದ ಪೂರ್ವಿ ಸದ್ಯ ಸಿಂಗಾಪುರದಲ್ಲಿ ವಾಸಿಸುತ್ತಿದ್ದಾಳೆ. ೮ನೇ ವಯಸ್ಸಿನಿಂದಲೇ ವಿವಿಧ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಂಡ ಈಕೆಗೆ ಹೊಸ ಹೊಸತನ್ನು ಆವಿಷ್ಕರಿಸುವ, ಕಲಿಯುವ ತುಡಿತ. ಅದುವೇ ಈಕೆಯನ್ನೀಗ ಅದ್ಭುತ ಕ್ರೀಡಾಪಟು, ಸಾಹಸಿಯನ್ನಾಗಿಸಿದೆ.
ಈಗಾಗಲೇ ಈಕೆ ಫೆನ್ಸಿಂಗ್ನಲ್ಲಿ 10 ಪದಕ, ರೈಫಲ್ ಶೂಟಿಂಗ್ನಲ್ಲಿ ೩ ಪದಕ, ಇಂಡೋರ್ ಸ್ಕೈಡೈವಿಂಗ್ನಲ್ಲಿ ಗಿನ್ನಿಸ್ ರೆಕಾರ್ಡ್ ಮಾಡಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.