ನವದೆಹಲಿ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ನಗರಾಭಿವೃದ್ಧಿ ಸಚಿವಾಯಲದ ಸ್ವಚ್ಛ ಭಾರತ ಶ್ರೇಯಾಂಕ ಪಟ್ಟಿಯ 476 ನಗರಗಳಲ್ಲಿ ಮೈಸೂರು ಅಗ್ರಸ್ಥಾನ ಪಡೆದಿದೆ.
ಟಾಪ್ 10 ನಗರಗಳಲ್ಲಿ ಕರ್ನಾಟಕದ ನಾಲ್ಕು ನಗರಗಳು ಸ್ಥಾನ ಪಡೆದಿದ್ದು, ದೇಶದ 476 ನಗರಗಳಲ್ಲಿ ಮೈಸೂರು ನಗರವು ಅತ್ಯಂತ ಶ್ರೇಷ್ಠ ಎನಿಸಿಕೊಂಡಿದೆ. ಅಗ್ರ 100ರ ಪಟ್ಟಿಯಲ್ಲಿ 15 ರಾಜ್ಯಗಳ ರಾಜಧಾನಿಗಳು ಮಾತ್ರ ಸ್ಥಾನ ಪಡೆದಿಕೊಂಡಿದ್ದು, ದಕ್ಷಿಣ ಭಾರತದ 39 ನಗರಗಳು ಸೇರಿವೆ. ಇದರಲ್ಲಿ ಪಶ್ಚಿಮ ಬಂಗಾಳದ 25 ನಗರಗಳಿವೆ.
ಕರ್ನಾಟಕದ ಮೈಸೂರು, ಮಂಡ್ಯ, ಬೆಂಗಳೂರು,ಹಾಸನ ಈ 10 ಪಟ್ಟಿಯಲ್ಲಿದೆ. ಘನ ತ್ಯಾಜ್ಯ ನಿರ್ವಹಣೆ, ನಗರಗಳ ಸ್ವಚ್ಛತೆ, ನೀರು ಪೂರೈಕೆ, ಬಯಲು ಶೌಚಾಲಯ ಪದ್ಧತಿಯ ಆಧಾರದಲ್ಲಿ ಈ ಶ್ರೇಯಾಂಕ ನೀಡಲಾಗಿದೆ. ಈ ಎಲ್ಲಾ ನಗರಗಳ ಪೈಕಿ ಮೈಸೂರು ಉತ್ತಮ ಘನ ತ್ಯಾಜ್ಯ ನಿರ್ವಹಣೆ, ಕನಿಷ್ಟ ಬಯಲು ಶೌಚಾಲಯ, ಸ್ವಚ್ಛತೆ ವ್ಯವಸ್ಥೆಯಿಂದ ಶ್ರೇಷ್ಠವೆನಿಸಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.