ಮುಂಬಯಿ: ಮಹಾರಾಷ್ಟ್ರದ ಶ್ರೀರಾಂಪುರ ತಾಲೂಕಿನ ಬೇಲಾಪುರದ ಮುಸ್ಲಿಮರು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಖಜಾಂಚಿ ದೇವಗಿರಿಜಿ ಮಹಾರಾಜ್ ಮತ್ತು ರಾಷ್ಟ್ರ ಸಂತಾಚಾರ್ಯ ಕಿಶೋರ್ಜಿ ವ್ಯಾಸ್ ಅವರಿಗೆ 44,111 ರೂ.ಗಳನ್ನು ಹಸ್ತಾಂತರ ಮಾಡಿದ್ದಾರೆ.
ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಖಜಾಂಚಿ ಗೋವಿಂದ್ ದೇವಗಿರಿಜಿ ಮಹಾರಾಜ್ ಮತ್ತು ಆಚಾರ್ಯ ಕಿಶೋರ್ಜಿ ವ್ಯಾಸ್ ಅವರು ತಮ್ಮ ಜನ್ಮಸ್ಥಳವಾದ ಬೇಲಾಪುರಕ್ಕೆ ಬರಲಿದ್ದಾರೆ ಎಂಬ ಮಾಹಿತಿ ಮುಸ್ಲಿಂ ಸಹೋದರರಿಗೆ ಸಿಕ್ಕಿತು. ಕೂಡಲೇ ಜುಮಾ ಮಸೀದಿ ಟ್ರಸ್ಟಿಗಳುರು ಮುಸ್ಲಿಮರ ಸಭೆ ಕರೆದರು. ಸಭೆಯಲ್ಲಿ ರಾಮ ಮಂದಿರಕ್ಕೆ ದೇಣಿಗೆ ನೀಡುವ ವಿಷಯವನ್ನು ಕೈಗೆತ್ತಿಕೊಳ್ಳಲಾಯಿತು. ಎಲ್ಲಾ ಮುಸ್ಲಿಂ ಸಹೋದರರು ಕೂಡಲೇ ರಾಮ ಮಂದಿರಕ್ಕೆ ಹಣವನ್ನು ಕೊಡುಗೆ ನೀಡಲು ಮುಂದಾದರು.
ಆಚಾರ್ಯ ಕಿಶೋರ್ ವ್ಯಾಸ್ ಗ್ರಾಮಕ್ಕೆ ಬಂದಾಗ ಮುಸ್ಲಿಂ ಸಮುದಾಯವು ರೂ. 33,111ಗಳನ್ನು ಹಸ್ತಾಂತರ ಮಾಡಿತು. ಮತ್ತೆ 11,000 ರೂಗಳನ್ನು ಮುಸ್ಲಿಂ ಸಹೋದರರ ಪರವಾಗಿ ಗೋವಿಂದ ದೇವಗಿರಿಜಿ ಮಹಾರಾಜ್ ಬಂದ ಸಂದರ್ಭದಲ್ಲಿ ಅವರಿಗೆ ಹಸ್ತಾಂತರಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.