ನವದೆಹಲಿ: ಇಂದು ಬಿಡುಗಡೆಯಾದ ನೀತಿ ಆಯೋಗದ ಎರಡನೇ ಇನ್ನೋವೇಶನ್ ಸೂಚ್ಯಂಕದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮತ್ತು ಕೇರಳ ಅಗ್ರ ಐದು ರಾಜ್ಯಗಳಾಗಿ ಹೊರಹೊಮ್ಮಿವೆ.
ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಮತ್ತು ಸಿಇಒ ಅಮಿತಾಭ್ ಕಾಂತ್ ಅವರು ಈ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು, ಸೂಚ್ಯಂಕವನ್ನು ಜಾಗತಿಕ ಇನ್ನೋವೇಶನ್ ಸೂಚ್ಯಂಕದ ಪ್ರಕಾರ ಅಭಿವೃದ್ಧಿಪಡಿಸಲಾಗಿದೆ. ಜಾರ್ಖಂಡ್, ಛತ್ತೀಸ್ಗಢ ಮತ್ತು ಬಿಹಾರವು ಸೂಚ್ಯಂಕದಲ್ಲಿ ಕೆಳಭಾಗದಲ್ಲಿದೆ.
ʼಇಂಡಿಯಾ ಇನ್ನೋವೇಶನ್ ಇಂಡೆಕ್ಸ್ 2020ʼ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಾವೀನ್ಯತೆಯನ್ನು ಬೆಂಬಲಿಸುವ ಅದರ ಕಾರ್ಯಕ್ಷಮತೆಯ ಆಧಾರದ ಮೇಲೆ ಸ್ಥಾನ ನೀಡುತ್ತದೆ ಮತ್ತು ಅವುಗಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಎತ್ತಿ ತೋರಿಸುವ ಮೂಲಕ ಅವುಗಳ ನಾವೀನ್ಯತೆ ನೀತಿಗಳನ್ನು ಸುಧಾರಿಸಲು ಅಧಿಕಾರ ನೀಡುವ ಗುರಿಯನ್ನು ಹೊಂದಿದೆ.
ಕಾರ್ಯಕ್ಷಮತೆಯನ್ನು ಪರಿಣಾಮಕಾರಿಯಾಗಿ ಹೋಲಿಸುವ ಸಲುವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು 17 ಪ್ರಮುಖ ರಾಜ್ಯಗಳು , 10 ಈಶಾನ್ಯ ಮತ್ತು ಬೆಟ್ಟ ರಾಜ್ಯಗಳು, ಮತ್ತು 9 ನಗರ ರಾಜ್ಯಗಳು ಮತ್ತು ಕೇಂದ್ರಾಡಳಿ ಪ್ರದೇಶಗಳು ಎಂದು ವಿಂಗಡಿಸಲಾಗಿದೆ. ಒಟ್ಟಾರೆಯಾಗಿ, ಇಂಡಿಯಾ ಇನ್ನೋವೇಶನ್ ಇಂಡೆಕ್ಸ್ 2020 ರ ಚೌಕಟ್ಟು 36 ಸೂಚಕಗಳನ್ನು ಒಳಗೊಂಡಿದೆ, ಇದರಲ್ಲಿ ಹಾರ್ಡ್ ಡೇಟಾ (32 ಸೂಚಕಗಳು) ಮತ್ತು ನಾಲ್ಕು ಸಂಯೋಜಿತ ಸೂಚಕಗಳು ಸೇರಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.