ಮಂಗಳೂರು : ನಗರದಲ್ಲಿ ಅಳವಡಿಸಲಾಗಿದ್ದ ರಸ್ತೆ ಸೂಚನಾ ಫಲಕವು ವಿದ್ಯಾರ್ಥಿಗಳ ಚುನಾವಣಾ ಪ್ರಚಾರದ ಭರಾಟೆಯಲ್ಲಿ ಕಳೆಗುಂದಿದೆ.
ರಾಮಕೃಷ್ಣ ಮಿಶನ್ ಸಂಸ್ಥೆಯು ಸ್ವಚ್ಛ ಮಂಗಳೂರು ಅಭಿಯಾನದಡಿ ವಿವಿಧ ಸಂಘ ಸಂಸ್ಥೆಗಳ ,ನಾಗರಿಕರ ಸಹಾಯದೊಂದಿಗೆ ಕಳೆದ ಹಲವು ತಿಂಗಳುಗಳಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಬಣ್ಣ ಕಳೆದುಕೊಂಡು ಅಸ್ಪಷ್ಟವಾಗಿದ್ದ ನಗರದ ರಸ್ತೆ ಸೂಚನಾ ಫಲಕವನ್ನೂ ನವೀಕರಣಗೊಳಿಸಿದೆ
ಆದರೆ ಮಂಗಳೂರು ವಿಶ್ವ ವಿದ್ಯಾಲಯದ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳು ತಮ್ಮ ಚುನಾವಣಾ ಪ್ರಚಾರದ ಕರಪತ್ರಗಳನ್ನು ದಾರಿ ಸೂಚನಾ ಫಲಕದ ಮೇಲೆ ಅಂಟಿಸಿ ತಮ್ಮ ಅವಿವೇಕಿತನವನ್ನು ಮೆರೆದಿದ್ದಾರೆ.
ವಿದ್ಯಾರ್ಥಿಗಳು ಈ ರಾಷ್ಟ್ರದ ಶಕ್ತಿ. ವಿದ್ಯಾರ್ಥಿಗಳಿಂದ ಹಲವು ಬದಲಾವಣೆಗಳು ಈ ದೇಶದಲ್ಲಿ ಆಗಿವೆ. ಸಮಾಜದ ಮುಂದಿನ ನಾಯಕತ್ವ ವಹಿಸಬೇಕಾದದ್ದು ವಿದ್ಯಾರ್ಥಿಗಳೇ. ಕೆಲವು ವಿದ್ಯಾರ್ಥಿಗಳು ಈ ರೀತಿ ವರ್ತಿಸಿ ಇನ್ನುಳಿದ ವಿದ್ಯಾರ್ಥಿ ಸಮುದಾಯವನ್ನು ತಲೆ ತಗ್ಗಿಸುವಂತೆ ಮಾಡಿದ್ದಾರೆ.
ಇತರರು ಮಾಡಿದ ಸ್ವಚ್ಛತಾ ಕಾರ್ಯಗಳ ಶ್ರಮವನ್ನು ತಿಳಿಯದೆ ವಿರೂಪಗೊಳಿಸುವುದು ಮುಂದಿನ ನಾಯಕತ್ವ ವಹಿಸುವ ನಾಯಕರ ಕುರೂಪ ಮನಸ್ಥಿತಿಗೆ ಸಾಕ್ಷಿ. ಇಂತಹ ವಿದ್ಯಾರ್ಥಿಗಳಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.