ನವದೆಹಲಿ: ಜನಪ್ರಿಯ ಡ್ರ್ಯಾಗನ್ ಹಣ್ಣನ್ನು “ಕಮಲಂ” ಎಂದು ಮರುನಾಮಕರಣ ಮಾಡಲು ಗುಜರಾತ್ ಸರ್ಕಾರ ಮಂಗಳವಾರ ನಿರ್ಧರಿಸಿದೆ. ಹಣ್ಣಿನ ಹೊರ ಆಕಾರ ಕಮಲವನ್ನು ಹೋಲುತ್ತದೆ, ಹೀಗಾಗಿ ಕಮಲಂ ಹೆಸರನ್ನು ಇಡುತ್ತಿರುವುದಾಗಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ.
“ಡ್ರ್ಯಾಗನ್ ಹಣ್ಣಿಗೆ ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಣ್ಣಿನ ಹೊರ ಆಕಾರವು ಕಮಲವನ್ನು ಹೋಲುತ್ತದೆ, ಆದ್ದರಿಂದ ಡ್ರ್ಯಾಗನ್ ಹಣ್ಣನ್ನು ಕಮಲಂ ಎಂದು ಮರುನಾಮಕರಣ ಮಾಡಲಾಗುವುದು” ಎಂದು ರೂಪಾನಿ ಮಾಹಿತಿ ನೀಡಿದ್ದಾರೆ.
ಸಂಸ್ಕೃತದಲ್ಲಿ ಕಮಲಂ ಎಂಬ ಪದದ ಅರ್ಥ ‘ಕಮಲ’ ಮತ್ತು ಹಣ್ಣು ಕಮಲದ ಆಕಾರದಲ್ಲಿರುವುದರಿಂದ ಹಣ್ಣನ್ನು ಕಮಲಂ ಎಂದು ಕರೆಯಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. “
“ಡ್ರ್ಯಾಗನ್ ಹಣ್ಣಿನ ಪೇಟೆಂಟ್ ಅನ್ನು ಕಮಲಂ ಎಂದು ಕರೆಯಲು ನಾವು ಅರ್ಜಿ ಸಲ್ಲಿಸಿದ್ದೇವೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ತೋಟಗಾರಿಕೆ ಅಭಿವೃದ್ಧಿ ಮಿಷನ್ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರೂಪಾನಿ, “ಡ್ರ್ಯಾಗನ್ ಹಣ್ಣು ಎಂಬ ಹೆಸರು ಚೀನಾದೊಂದಿಗೆ ಸಂಬಂಧ ಹೊಂದಿದ್ದರಿಂದ ಅದನ್ನು ಬದಲಾಯಿಸಲು ನಿರ್ಧರಿಸಿದ್ದೇವೆ. ನಿರ್ಧಾರದ ಹಿಂದೆ ಯಾವುದೇ ರಾಜಕೀಯ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಡ್ರ್ಯಾಗನ್ ಹಣ್ಣು ಉಷ್ಣವಲಯದ ಹಣ್ಣು, ಇದು ವಿಶಿಷ್ಟ ಆಕಾರ ಮತ್ತು ರುಚಿಯನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.