ನವದೆಹಲಿ: ಪಾಕಿಸ್ಥಾನದಿಂದ ತಮಗೆ ಸ್ವಾತಂತ್ರ್ಯವನ್ನು ದೊರಕಿಸಿಕೊಡುವಂತೆ ಕೋರಿ ಪಾಕಿಸ್ಥಾನದ ಸಿಂಧ್ನಲ್ಲಿ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ವಿಶ್ವ ನಾಯಕರ ಪೋಸ್ಟರ್ಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಆಧುನಿಕ ಸಿಂಧಿ ರಾಷ್ಟ್ರೀಯತೆಯ ಸ್ಥಾಪಕ ಪಿತಾಮಹರಲ್ಲಿ ಒಬ್ಬರಾದ ಜಿಎಂ ಸೈಯದ್ ಅವರ 117 ನೇ ಜನ್ಮ ದಿನಾಚರಣೆಯಂದು ಆಯೋಜಿಸಿದ್ದ ಬೃಹತ್ ಸ್ವಾತಂತ್ರ್ಯ ಪರ ಸಮಾವೇಶದಲ್ಲಿ ಪ್ರತಿಭಟನಾಕಾರರು ಪಿಎಂ ಮೋದಿ, ಯುಎಸ್ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡನ್, ನ್ಯೂಜಿಲೆಂಡ್ ಪಿಎಂ ಜಸಿಂತಾ ಮತ್ತು ಇತರ ವಿಶ್ವ ನಾಯಕರ ಪೋಸ್ಟರ್ಗಳನ್ನು ಹಿಡಿದಿದ್ದಾರೆ.
ಸಿಂಧುದೇಶದ ಸ್ವಾತಂತ್ರ್ಯಕ್ಕಾಗಿ ಮಧ್ಯಪ್ರವೇಶ ಮಾಡುವಂತೆ ಅವರು ಈ ನಾಯಕರನ್ನು ಕೋರಿದ್ದಾರೆ. ಈ ಮೆಗಾ ಸಮಾವೇಶ ಪಾಕಿಸ್ಥಾನದ ಸಿಂಧ್ ಪಟ್ಟಣದಲ್ಲಿ ನಡೆಯಿತು ಮತ್ತು ಹಲವಾರು ಪ್ರತಿಭಟನಾಕಾರರು ಭಾರತದ ಪ್ರಧಾನ ಮಂತ್ರಿಯ ಪೋಸ್ಟರ್ ಹಿಡಿದಿದ್ದು ಎಲ್ಲರ ಗಮನ ಸೆಳೆದಿದೆ.
ಸಿಂಧ್ ಸಿಂಧೂ ನಾಗರೀಕತೆ ಮತ್ತು ವೈದಿಕ ಧರ್ಮದ ನೆಲೆಯಾಗಿದೆ , ಇದನ್ನು ಬ್ರಿಟಿಷ್ ಸಾಮ್ರಾಜ್ಯವು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿತ್ತು ಮತ್ತು 1947 ರಲ್ಲಿ ಪಾಕಿಸ್ಥಾನದ ದುಷ್ಟ ಇಸ್ಲಾಮಿಕ್ ಕೈಗೆ ಅದನ್ನು ನೀಡಿತು. ಸಿಂಧ್ನಲ್ಲಿ ಹಲವಾರು ರಾಷ್ಟ್ರೀಯವಾದಿ ಪಕ್ಷಗಳಿವೆ, ಅವುಗಳು ಸ್ವತಂತ್ರ ಸಿಂಧ್ ರಾಷ್ಟ್ರಕ್ಕಾಗಿ ಪ್ರತಿಪಾದಿಸುತ್ತಿವೆ. ಅದರ ನಾಯಕರು ಈ ವಿಷಯವನ್ನು ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಎತ್ತುತ್ತಿದ್ದಾರೆ ಮತ್ತು ಪಾಕಿಸ್ಥಾನವನ್ನು “ಆಕ್ರಮಣಕಾರ” ಎಂದು ಕರೆಯುತ್ತಿದ್ದಾರೆ. ಪಾಕ್ ಸಂಪನ್ಮೂಲಗಳನ್ನು ದುರ್ಬಳಕೆ ಮಾಡುವುದನ್ನು ಮುಂದುವರೆಸಿದೆ ಮತ್ತು ಈ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಭಾಗಿಯಾಗಿದೆ ಎಂಬುದು ಪ್ರತಿಭಟನಾಕಾರರ ಆರೋಪ.
#WATCH: Placards of PM Narendra Modi & other world leaders raised at pro-freedom rally in Sann town of Sindh in Pakistan, on 17th Jan.
Participants of the rally raised pro-freedom slogans and placards, seeking the intervention of world leaders in people’s demand for Sindhudesh. pic.twitter.com/FJIz3PmRVD
— ANI (@ANI) January 18, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.