ಬೆಳ್ತಂಗಡಿ : ಆಸ್ತಿ ವಿವಾದಕ್ಕೆ ಸಂಬಂದಿಸಿದ ಭೂಮಾಲೀಕರೋರ್ವರು ನೆರಿಯ ಗ್ರಾಮದಲ್ಲಿ ಸುಂದರ ಮಲೆಕುಡಿಯರ ಕೈ ಬೆರಳುಗಳನ್ನು ಅವಮಾನುಷ ಹಾಗೂ ಅವಮಾನವೀಯ ರೀತಿಯಲ್ಲಿ ಕತ್ತರಿಸಿದ ಹೀನ ಕೃತ್ಯವನ್ನು ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿಯ ಎಸ್.ಟಿ ಮೋರ್ಚಾ ಘಟಕವು ತೀವ್ರವಾಗಿ ಖಂಡಿಸಿದೆ.
ಸುಂದರ ಮಲೆಕುಡಿಯರ ವಶದಲ್ಲಿದ್ದ ಭೂಮಿಯನ್ನು ಕಬಳಿಸಲು ಇಂತಹ ನೀಚಕೃತ್ಯವೆಸಗಿದ ಆರೋಪಿ ಗೋಪಾಲಕೃಷ್ಣ ಗೌಡರ ವರ್ತನೆಯಿಂದ ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಅಕ್ರಮವಾಗಿ ಭೂಕಬಳಿಕೆ ಮಾಡಲು ಇಲ್ಲ ಸಲ್ಲದವರ ಮೇಲೆ ಸುಳ್ಳುದೂರು ದೌರ್ಜನ್ಯ ನಡೆಸುವುದು ಅಲ್ಲದೆ ಕೊಲೆಯತ್ನವನ್ನು ನಡೆಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವ ವಿಚಾರವಲ್ಲ ಜಿಲ್ಲಾಡಳಿತ ಕೂಡಲೇ ಮದ್ಯಪ್ರವೇಶಿಸಿ ಆರೋಪಿ ಹಾಗೂ ಈ ಹೀನಕೃತ್ಯಕ್ಕೆ ಪ್ರೇರಣೆ ನೀಡಿದವರ ವಿರುದ್ಧ ಕಠಿಣ ಕಾನೂನಿನ ಕ್ರಮ ಕೈಗೊಳ್ಳಬೇಕು, ಪರಿಸರದಲ್ಲಿ ಭೀತಿಯಿಂದಿರುವ ಪರಿಶಿಷ್ಟ ಪಂಗಡದ ಎಲ್ಲಾ ಜನತೆಗೆ ಸೂಕ್ತರಕ್ಷಣೆ ಕೊಡಬೇಕು.
ಅಕ್ರಮ-ಸಕ್ರಮದಡಿಯಲ್ಲಿ ಅರ್ಜಿ ಹಾಕಿರುವವರ ಎಲ್ಲಾ ಕುಟುಂಬಗಳಿಗೆ ಹಕ್ಕು ಪತ್ರ ನೀಡಬೇಕು. ಗಾಯಾಳು ಸುಂದರ ಮಲೆಕುಡಿಯರ ಕುಟುಂಬದ ಒರ್ವ ಸದಸ್ಯರಿಗೆ ಸರ್ಕಾರಿ ಉದ್ಯೋಗ ಒದಗಿಸಬೇಕು. ಈ ಕುಟುಂಬದ ಮಕ್ಕಳ ಮುಂದಿನ ವಿಧ್ಯಾಬ್ಯಾಸ ಸಂಪೂರ್ಣ ಜವಾಬ್ದಾರಿ ಸರಕಾರ ನೋಡಿಕೊಳ್ಳಬೇಕು. ಎಂದು ಬೆಳ್ತಗಂಡಿ ಬಿಜೆಪಿ ಎಸ್.ಟಿ ಮೊರ್ಚಾ ಅಗ್ರಹಿಸಿದೆ.
ಇದಕ್ಕೆ ತಪ್ಪಿದಲ್ಲಿ ಉಗ್ರಹೋರಾಟ ಮಾಡುತ್ತೇವೆ ಎಂದು ಎಸ್.ಟಿ ಮೋರ್ಚಾದ ಅಧ್ಯಕ್ಷರಾದ ಲಿಂಗಪ್ಪ ನಾಯ್ಕ, ಎಸ್.ಸಿ ಮೋರ್ಚಾ ಅಧ್ಯಕ್ಷರಾದ ರಾಘವ ಕಲ್ಮಂಜ, ಜಿ,ಪಂ ಸದಸ್ಯರಾದ ಕೊರಗಪ್ಪ ನಾಯ್ಕ, ಗ್ರಾ.ಪಂ. ಅಧ್ಯಕ್ಷರಾದ ಮಹ್ಮದ್, ಗ್ರಾ.ಪಂ.ಸದಸ್ಯರು ಬಾಬು ಗೌಡ ಮಂಡಲದ ಪ್ರ.ಕಾರ್ಯದರ್ಶಿ ಸೀತಾರಾಮ್ ಬಿ.ಎಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.