ನವದೆಹಲಿ: 2019-20ರ ಅವಧಿಯಲ್ಲಿ ನಡೆದ ರಾಜ್ಯಸಭಾ ಕಲಾಪಗಳಲ್ಲಿ ಸಂಸ್ಕೃತವು ಐದನೇ ಹೆಚ್ಚು ಬಳಸಿದ ಭಾಷೆಯಾಗಿದೆ ಎಂದು ರಾಜ್ಯಸಭಾ ಸಚಿವಾಲಯದ ಮಾಹಿತಿಯು ಬಹಿರಂಗಪಡಿಸಿದೆ. ಹಿಂದಿ, ತೆಲುಗು, ಉರ್ದು ಮತ್ತು ತಮಿಳು ಕ್ರಮವಾಗಿ ಹೆಚ್ಚು ಬಳಸಿದ ನಾಲ್ಕು ಭಾಷೆಗಳಾಗಿವೆ .
2004-17ರ ನಡುವಿನ 14 ವರ್ಷಗಳ ಅವಧಿಗೆ ಹೋಲಿಸಿದರೆ 2020 ರಲ್ಲಿ ರಾಜ್ಯಸಭೆಯಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆ ಐದು ಪಟ್ಟು ಹೆಚ್ಚಾಗಿದೆ ಎಂದು ಸಚಿವಾಲಯದ ಮಾಹಿತಿಯು ಬಹಿರಂಗಪಡಿಸಿದೆ.
ಅಲ್ಲದೆ, 2018 ಮತ್ತು 2020 ರ ನಡುವೆ, ಡೋಗ್ರಿ, ಕಾಶ್ಮೀರಿ, ಕೊಂಕಣಿ ಮತ್ತು ಸಂತಾಲಿ ಎಂಬ ನಾಲ್ಕು ಭಾಷೆಗಳನ್ನು ರಾಜ್ಯಸಭೆಯಲ್ಲಿ ಮೊದಲ ಬಾರಿಗೆ ಬಳಸಲಾಯಿತು. ಅಲ್ಲದೆ, ಈ ಅವಧಿಯಲ್ಲಿ, ಅಸ್ಸಾಮಿ, ಬೋಡೋ, ಗುಜರಾತಿ, ಮೈಥಿಲಿ, ಮಣಿಪುರಿ ಮತ್ತು ನೇಪಾಳಿ ಎಂಬ ಆರು ಭಾಷೆಗಳನ್ನು ದೀರ್ಘ ಕಾಲದ ನಂತರ ಬಳಸಲಾಯಿತು.
ರಾಜ್ಯಸಭೆಯ ಮುಖ್ಯಸ್ಥ ಎಂ.ವೆಂಕಯ್ಯ ನಾಯ್ಡು ಅವರು ಸದನದಲ್ಲಿ ಮಾತೃಭಾಷೆಯಲ್ಲಿ ಮಾತನಾಡಲು ಮೇಲ್ಮನೆಯ ಸದಸ್ಯರನ್ನು ನಿಯಮಿತವಾಗಿ ಒತ್ತಾಯಿಸುತ್ತಿರುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.