ನವದೆಹಲಿ: ಚೀನಾದ ಕ್ಸಿನ್ಜಿಯಾಂಗ್ ಪ್ರದೇಶದಿಂದ ಹತ್ತಿ ಮತ್ತು ಟೊಮೆಟೊ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದನ್ನು ಅಮೆರಿಕಾ ನಿಷೇಧಿಸಿದೆ. ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (ಸಿಪಿಬಿ) ಪ್ರಕಾರ, ಚೀನಾದ ಕ್ಸಿನ್ಜಿಯಾಂಗ್ ಉಯಿಘರ್ ಸ್ವಾಯತ್ತ ಪ್ರದೇಶದಲ್ಲಿ ಉತ್ಪಾದಿಸುವ ಹತ್ತಿ ಮತ್ತು ಟೊಮೆಟೊ ಉತ್ಪನ್ನಗಳು ಯುಎಸ್ನ ಎಲ್ಲಾ ಬಂದರುಗಳನ್ನು ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.
ಬಂಧಿತರಾಗಿರುವ ಉಯಿಘರ್ ಜನರನ್ನು ಬಲವಂತವಾಗಿ ಬಳಸಿಕೊಂಡು ಈ ಉತ್ಪನ್ನಗಳನ್ನು ತಯಾರಿಲಾಗುತ್ತಿದೆ ಎಂದು ವರದಿಗಳು ಬಂದ ನಂತರ ಅಮೆರಿಕ ಈ ನಿರ್ಬಂಧವನ್ನು ವಿಧಿಸಿದೆ. ಅಮೆರಿಕವು ನಿಷೇಧಿಸಿದ ಉತ್ಪನ್ನಗಳೆಂದರೆ ಉಡುಪು, ಜವಳಿ, ಟೊಮೆಟೊ ಬೀಜಗಳು, ಟೊಮೆಟೊ ಸಾಸ್ ಮತ್ತು ಹತ್ತಿ ಮತ್ತು ಟೊಮೆಟೊಗಳಿಂದ ತಯಾರಿಸಿದ ಇತರ ಸರಕುಗಳು ಸೇರಿವೆ.
ನ್ಯಾಯಯುತ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಅಮೆರಿಕಾಗೆ ಸರಕುಗಳನ್ನು ರಫ್ತು ಮಾಡಲು ಚೀನಾ ಸರ್ಕಾರವು ಆಧುನಿಕ ಗುಲಾಮಗಿರಿಯನ್ನು ಬಳಸಿಕೊಳ್ಳುವುದನ್ನು ನಾವು ಸಹಿಸುವುದಿಲ್ಲ. ಬಲವಂತದ ಶ್ರಮವನ್ನು ಬಳಸಿಕೊಂಡು ಉತ್ಪನ್ನಗಳ ಆಮದು ಮಾನವ ಹಕ್ಕುಗಳನ್ನು ಗೌರವಿಸುವ ಅಮೆರಿಕನ್ ವ್ಯವಹಾರಗಳಿಗೆ ನೋವುಂಟು ಮಾಡುತ್ತದೆ ಮತ್ತು ಗ್ರಾಹಕರನ್ನು ಅನೈತಿಕ ಖರೀದಿಗೆ ಒಡ್ಡುತ್ತದೆ ಎಂದು ಅಮೆರಿಕಾದ ಹೇಳಿದೆ.
ಉಯಿಘರ್ ಮುಸ್ಲಿಮರನ್ನು ಸಾಮೂಹಿಕ ಬಂಧನ ಶಿಬಿರಗಳಿಗೆ ಕಳುಹಿಸುವ, ಅವರ ಧಾರ್ಮಿಕ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವ ಚೀನಾವನ್ನು ಜಾಗತಿಕವಾಗಿ ಖಂಡಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.