ವಾಷಿಂಗ್ಟನ್: ಜೋ ಬೈಡೆನ್ ಅವರ ಚುನಾವಣಾ ವಿಜಯದ ಪ್ರಮಾಣೀಕರಣವನ್ನು ನಿಲ್ಲಿಸಲು ಜನಸಮೂಹವನ್ನು ಎತ್ತಿಕಟ್ಟಲು ಹಿಂಸಾತ್ಮಕ ಪ್ರಯತ್ನ ನಡೆಸಿದ ಡೊನಾಲ್ಡ್ ಟ್ರಂಪ್ ಇದೀಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಅವರನ್ನು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎರಡನೇ ಬಾರಿಗೆ ಮಹಾಭಿಯೋಗಕ್ಕೆ ಒಳಪಡಿಸಿದೆ. ಅಮೆರಿಕ ಇತಿಹಾಸದಲ್ಲೇ ಮೊದಲ ಬಾರಿಗೆ ಎರಡನೇ ಬಾರಿಗೆ ಮಹಾಭಿಯೋಗಕ್ಕೆ ಒಳಗಾದ ಮೊದಲ ಅಧ್ಯಕ್ಷ ಟ್ರಂಪ್ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ.
232-197 ಸಂಖ್ಯೆಯ ಮತಗಳಿಂದ ಟ್ರಂಪ್ ಅವರನ್ನು ಮಹಾಭಿಯೋಗಕ್ಕೆ ಒಳಪಡಿಸಲಾಗಿದೆ.
ಟ್ರಂಪ್ ಅವರು ಅಧಿಕೃತವಾಗಿ ಅಧ್ಯಕ್ಷ ಹುದ್ದೆಯನ್ನು ತೊರೆದು ಹೋಗಲು ಇನ್ನು ಕೇವಲ ಒಂದು ವಾರ ಮಾತ್ರ ಇದೆ. ಅಷ್ಟರೊಳಗೆ ಅವರಿಗೆ ನಿರ್ಗಮಿಸಲು ಡೆಮೋಕ್ರಾಟ್ಸ್ ಅವಕಾಶ ನೀಡಿದ್ದಾರೆ ಎನ್ನಲಾಗಿದೆ.
ಟ್ರಂಪ್ ಬೆಂಬಲಿಗರು ನಡೆಸಿದ ಕುಕೃತ್ಯ ಅಮೆರಿಕ ಇತಿಹಾಸದಲ್ಲಿ ದೊಡ್ಡ ಕಪ್ಪು ಚುಕ್ಕೆಯಾಗಿದ್ದು, ಟ್ರಂಪ್ ಅವರಿಗೆ ದೊಡ್ಡ ಮುಖಭಂಗ ಉಂಟು ಮಾಡಿದೆ. ಅವರ ಟ್ವಿಟರ್, ಫೇಸ್ಬುಕ್ ಖಾತೆ ರದ್ದುಗೊಂಡಿದೆ, ಎರಡು ಬಾರಿ ವಾಗ್ದಂಡನೆಗೆ ಒಳಗಾಗಿದ್ದಾರೆ. ಒಟ್ಟಿನಲ್ಲಿ ಟ್ರಂಪ್ ವರ್ತನೆ ಇಡೀ ವಿಶ್ವದಲ್ಲೇ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.