
ನವದೆಹಲಿ: ಬೈಜು ರವೀಂದ್ರನ್ ನೇತೃತ್ವದ ಬೆಂಗಳೂರು ಮೂಲದ ಎಡ್-ಟೆಕ್ ಸ್ಟಾರ್ಟ್ಅಪ್ ಬೈಜೂಸ್, ಖಾಸಗಿ ಆಕಾಶ್ ಎಜುಕೇಷನಲ್ ಸರ್ವೀಸಸ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಸಜ್ಜಾಗಿದೆ. ಆಕಾಶ್ ದೇಶಾದ್ಯಂತ 200 ಕ್ಕೂ ಹೆಚ್ಚು ಭೌತಿಕ ಬೋಧನಾ ಕೇಂದ್ರಗಳನ್ನು ಹೊಂದಿದೆ. ಇದನ್ನು $ 1 ಬಿಲಿಯನ್ಗೆ ಖರೀದಿಸಲು ಬೈಜೂಸ್ ಸಜ್ಜಾಗಿದೆ ಎಂದು ವರದಿಗಳು ತಿಳಿಸಿವೆ.
1988 ರಲ್ಲಿ ಸ್ಥಾಪನೆಯಾದ ಆಕಾಶ್ ಎಜುಕೇಷನಲ್ ಸರ್ವೀಸಸ್ ದೇಶಾದ್ಯಂತ 200 ಕ್ಕೂ ಹೆಚ್ಚು ಭೌತಿಕ ಬೋಧನಾ ಕೇಂದ್ರಗಳನ್ನು ನಿರ್ವಹಿಸುತ್ತಿದೆ ಮತ್ತು ದೇಶದ ಉನ್ನತ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ತಯಾರಿ ನಡೆಸುತ್ತಿರುವ 2,50,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುತ್ತಿದೆ.
$ 11 ಬಿಲಿಯನ್ ಮೌಲ್ಯದ ಬೈಜೂಸ್ ಅನ್ನು ವಿಶ್ವದ ಮೌಲ್ಯಯುತ ಎಡ್-ಟೆಕ್ ಸ್ಟಾರ್ಟ್ಅಪ್ ಎಂದು ಕರೆಯಲಾಗುತ್ತದೆ. ಕೇವಲ ಕಳೆದ ಎರಡು ವರ್ಷಗಳಲ್ಲಿ ಇದು $ 800 ಮಿಲಿಯನ್ ಗಳಿಸಿದೆ. ಅಲ್ಲದೆ, ಕಂಪನಿಯು 2019 ರಲ್ಲಿಯೇ ಲಾಭದಾಯಕತೆ ಹೊಂದಿತ್ತು ಮತ್ತು ಪ್ರಸ್ತುತ 2020 ರ ಅಂತ್ಯದ ವೇಳೆಗೆ 70 ಮಿಲಿಯನ್ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುತ್ತಿದೆ. ಆಕಾಶ್ ಎಜುಕೇಶನ್ ಸರ್ವೀಸಸ್ ಸ್ವಾಧೀನಕ್ಕೂ ಮುಂಚಿತವಾಗಿ, ಬೈಜೂಸ್ ಕಳೆದ ವರ್ಷ $ 300 ಮಿಲಿಯನ್ ಒಪ್ಪಂದದಲ್ಲಿ ಕೋಡಿಂಗ್ ಪ್ಲಾಟ್ಫಾರ್ಮ್ ವೈಟ್ಹ್ಯಾಟ್ ಜೂನಿಯರ್ ಅನ್ನು ಸಹ ಸ್ವಾಧೀನಪಡಿಸಿಕೊಂಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


