ನವದೆಹಲಿ: ಪುಣೆ ಮೆಟ್ರೋ ಯೋಜನೆಯ ಮೊದಲ ಹಂತಕ್ಕೆ ಭಾರತದ ಮೊದಲ ಸ್ಥಳೀಯವಾಗಿ ತಯಾರಿಸಿದ ಟಿಟಘರ್-ಫೈರ್ಮಾ ರೈಲು ಸೆಟ್ ಸಜ್ಜಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರಾ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಬಹಿರಂಗಪಡಿಸಿದ್ದಾರೆ.
ಪುಣೆ ಮೆಟ್ರೋ ಯೋಜನೆಯ ಮೊದಲ ಹಂತ 2021ರ ಮೇನಲ್ಲಿ ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಲಿದೆ.
ಈ ರೈಲು-ಸೆಟ್ಗಳನ್ನು 2021 ರ ಸ್ವಾತಂತ್ರ್ಯ ದಿನದಂದು ರವಾನಿಸಲಾಗುತ್ತಿದೆ ಮತ್ತು ಈ ಯೋಜನೆಗಾಗಿ ಹಲವು ಸಂಖ್ಯೆಯ ಇಟಾಲಿಯನ್ ರೈಲು-ಸೆಟ್ಗಳನ್ನು ಮೇ 2021 ರಲ್ಲಿ ಭಾರತಕ್ಕೆ ಕಳುಹಿಸಲಾಗುತ್ತಿದೆ. 2019 ರ ಆಗಸ್ಟ್ನಲ್ಲಿ ಪುಣೆ ಮೆಟ್ರೊದ 102 ಕೋಚ್ ರೋಲಿಂಗ್ ಸ್ಟಾಕ್ಗಾಗಿ 1,125 ಕೋಟಿ ರೂ.ಗಳ ಗುತ್ತಿಗೆಯನ್ನು ಟಿಟಘರ್ ಫೈರ್ಮಾಗೆ ನೀಡಲಾಯಿತು.
ಕಂಪನಿಗೆ 160 ವಾರಗಳ ಗಡುವನ್ನು ನೀಡಲಾಗಿತ್ತು, ಆಗಸ್ಟ್ 2020 ರಲ್ಲಿ ಕಂಪನಿ ಕೋಚ್ನ ಅಂತಿಮ ವಿನ್ಯಾಸವನ್ನು ಬಹಿರಂಗಪಡಿಸಲಾಯಿತು. 15.5 ಟನ್ಗಳಷ್ಟು ಆಕ್ಸಲ್ ಲೋಡ್ ಹೊಂದಿರುವ ಭಾರತದ ಹಗುರವಾದ ಬೋಗಿ ಇದಾಗಿದೆ ಎಂದು ಟಿಟಘರ್ ಪ್ರತಿಪಾದಿಸಿದೆ.
ದುರ್ಗಾ ಶಂಕರ್ ಮಿಶ್ರಾ ಕಳೆದ ವಾರಾಂತ್ಯದಲ್ಲಿ ಮಹಾರಾಷ್ಟ್ರ ಮೆಟ್ರೋ ರೈಲು ನಿಗಮದ ಕೆಲವು ಅಧಿಕಾರಿಗಳೊಂದಿಗೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಟಿಟಘರ್ನ ಸ್ಥಳೀಯ ಘಟಕಕ್ಕೆ ಭೇಟಿ ನೀಡಿದರು. ಈ ರೈಲು-ಸೆಟ್ಗಳಿಗೆ ಅವು ಕಾರ್ಯನಿರ್ವಹಿಸುವ ರೇಖೆಯ ಪ್ರಕಾರ ಬಣ್ಣವನ್ನು ನೀಡಲಾತ್ತವೆ. ಆದ್ದರಿಂದ ಪಿಂಪ್ರಿ ಚಿಂಚ್ವಾಡ್ ಮುನ್ಸಿಪಲ್ ಕಾರ್ಪೊರೇಷನ್ (ಪಿಸಿಎಂಸಿ) – ಸ್ವರ್ಗೇಟ್ ಮಾರ್ಗದಲ್ಲಿ ಚಲಿಸುವ ಬೋಗಿಗಳು ನೇರಳೆ ಬಣ್ಣದ್ದಾಗಿದ್ದರೆ, ವನಾಜ್ – ರಾಮ್ವಾಡಿ ಮಾರ್ಗದಲ್ಲಿ ಪ್ರಯಾಣಿಸುವ ಬೋಗಿ ಆಕ್ವಾ ಬಣ್ಣದಲ್ಲಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.