ಮಂಗಳೂರು: ರಸಗೊಬ್ಬರ ತಯಾರಿಕಾ ಕಂಪನಿಯು ಸಾಮಾಜಿಕ ಬದ್ದತಾ ಕಾರ್ಯದಡಿ ತನ್ನ ಅನುದಾನವನ್ನು ಮಾನವೀಯ ನೆಲೆಯಲ್ಲಿ ಬಳಕೆ ಮಾಡಲು ಮುಂದಾಗಿದೆ. ಆ ಮೂಲಕ ಜನರ ಬಾಳಿನಲ್ಲಿ ಧೈರ್ಯ ತುಂಬುವಂತಹ ಕೆಲಸ ಮಾಡುತ್ತಿದ್ದು ಇದು ದೇವರು ಮೆಚ್ಚುವ ಕೆಲಸವಾಗಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಹೇಳಿದರು.
ಪಣಂಬೂರು ಎಂಸಿಎಫ್ನಲ್ಲಿ ಮಂಗಳವಾರ ಕೃತಕ ಅಂಗಾಂಗ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃತಕ ಅಂಗಾಂಗಗಳನ್ನು ವಿತರಣೆ ಮಾಡುವಂತೆ ದಿವ್ಯಾಂಗರು ಸಲ್ಲಿಸಿದ್ದ ಮನವಿಗೆ ಸ್ಪಂದಿಸಿ, ಗುಣಮಟ್ಟದ ಸಲಕರಣೆ ವಿತರಿಸಲು ಎಂಸಿಎಫ್ ಮುಂದಾಗಿದೆ. ಕಳೆದ ಮೂರು ವರ್ಷಗಳಿಂದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಸಂಸ್ಥೆ ನೀಡುತ್ತಾ ಬಂದಿದೆ. ಇದರ ಜತೆಗೆ ಶಿಕ್ಷಣ, ಆರೋಗ್ಯ, ಉಚಿತ ವೈದ್ಯಕೀಯ ಶಿಬಿರಗಳನ್ನು ಸಹ ಆಯೋಜಿಸುವ ಮೂಲಕ ಮಾದರಿಯಾಗುತ್ತಿದೆ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ದಿವ್ಯಾಂಗರಿಗೂ ಇತರರಂತೆ ಬದುಕಬೇಕೆಂಬ ಆಸೆಯಿರುತ್ತದೆ. ಅವರ ಕೆಲಸಗಳನ್ನು ಮಾಡಿಕೊಳ್ಳಲು ನಾವು ಅನುವು ಮಾಡಿಕೊಟ್ಟಾಗ ಅವರಲ್ಲಿ ಧೈರ್ಯ ತುಂಬಲು ಸಾಧ್ಯ .ಇಂತಹ ಕೆಲಸವನ್ನು ಎಂಸಿಎಫ್ ಮಾಡುತ್ತಿದೆ ಎಂದು ಶ್ಲಾಘಿಸಿದರು.
ತನ್ನ ಕ್ಷೇತ್ರದ ಅಂಗನವಾಡಿ ದುರಸ್ತಿಗೆ ಸಿಎಸ್ಆರ್ ನಿಧಿಯಿಂದ ಅನುದಾನ ನೀಡಿದ ಸಂಸ್ಥೆಯನ್ನು ಶಾಸಕ ವೇದವ್ಯಾಸ ಕಾಮತ್ ಶ್ಲಾಘಿಸಿದರು.
ಎಂಸಿಎಫ್ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಭಾಕರ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುಮಾರು ಎಂಟು ಮಂದಿ ದಿವ್ಯಾಂಗರಿಗೆ ಕೃತಕ ಕಾಲು, ಕೈ ವಿತರಣೆ, ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಐದು ಟ್ರಾಲಿ, ಎರಡು ವೀಲ್ ಚೇರ್, ಸ್ಯಾನಿಟೈಸರ್, ಮಾಸ್ಕ್ ವಿತರಣೆ, ಮಂಗಳೂರಿನ ಅಂಗನವಾಡಿ ಪುನರ್ನವೀಕರಣಕ್ಕೆ 5 ಲಕ್ಷ ರೂ.ಬಿಡುಗಡೆಯ ಪತ್ರ ವಿತರಿಸಲಾಯಿತು.
ದ.ಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ರಾಮಚಂದ್ರ ಬಾಯಾರಿ, ಕಾರ್ಪೊರೇಟರ್ಗಳಾದ ಜಗದೀಶ್ ಶೆಟ್ಟಿ, ರಾಜೇಶ್ ಸಾಲ್ಯಾನ್, ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಆಧೀಕ್ಷಕ ಡಾ. ದುರ್ಗಾ ಪ್ರಸಾದ್, ಡಾ.ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಡಾ. ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.