ನವದೆಹಲಿ: ಪೂರ್ವ ಲಡಾಕ್ನಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿ ಉದ್ವಿಗ್ನತೆಯ ಈ ಸಂದರ್ಭದಲ್ಲಿ 50,000 ಕ್ಕೂ ಹೆಚ್ಚು ಭಾರತೀಯ ಸೈನಿಕರನ್ನು ಇಲ್ಲಿ ನಿಯೋಜಿಸಲಾಗಿದೆ. ಅವರು ನಿರಂತರವಾಗಿ ಪ್ರತಿಕೂಲ ಪರಿಸ್ಥಿತಿಗಳೊಂದಿಗೆ ಹೋರಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸಹಾಯ ಮಾಡುವ ಪ್ರಯತ್ನದಲ್ಲಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಹಿಮ್-ತಾಪಕ್ ಎಂಬ ಹೀಟಿಂಗ್ ಡಿವೈಸ್ ಮತ್ತು ಹಿಮ ಕರಗಿಸುವಂತಹ ಅನೇಕ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ.
ಪೂರ್ವ ಲಡಾಖ್, ಸಿಯಾಚಿನ್ ಮತ್ತು ಎತ್ತರದ ಪ್ರದೇಶಗಳಲ್ಲಿ ನಿಯೋಜಿಸಲಾಗಿರುವ ಭಾರತೀಯ ಸೇನೆಗಾಗಿ ಹಿಮ್ ತಾಪಕ್ ಸ್ಪೇಸ್ ಬೀಟಿಂಗ್ ಡಿವೈಸ್ (ಬುಖಾರಿ) ಅನ್ನು ಡಿಆರ್ಡಿಒ ಅಭಿವೃದ್ಧಿಪಡಿಸಿದೆ ಮತ್ತು ಈ ಉಪಕರಣಗಳಿಗೆ 420 ಕೋಟಿ ರೂ.ಮೌಲ್ಯದ ಅರ್ಡರ್ ನೀಡಲಾಗಿದೆ.
“ಭಾರತೀಯ ಸೇನೆಯು ಈ ಡಿವೈಸ್ನ ತಯಾರಕರಿಗೆ 420 ಕೋಟಿ ರೂ. ಮೌಲ್ಯದ ಆದೇಶಗಳನ್ನು ನೀಡಿದೆ ಮತ್ತು ಇದನ್ನು ಸೇನೆ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ಪಡೆಗಳು ನಿಯೋಜಿತರಾಗಿರುವ ತೀವ್ರ ಹಿಮ ಪ್ರದೇಶದಲ್ಲಿ ನಿಯೋಜಿಸಲಾಗುತ್ತದೆ” ಎಂದು ಮೂಲಗಳು ತಿಳಿಸಿವೆ.
“ನಾವು ಬುಖಾರಿ ಎಂಬ ಹೆಸರಿನ ಒಂದು ಸುಧಾರಿತ ಬಾಹ್ಯಾಕಾಶ ತಾಪನ ಸಾಧನವನ್ನು ಅಭಿವೃದ್ಧಿಪಡಿಸಿದ್ದೇವೆ. ಇದು ಮೂರು ಸುಧಾರಣೆಗಳನ್ನು ಹೊಂದಿದೆ. ಮೊದಲನೆಯದು ಈ ಸಾಧನದಲ್ಲಿ ತೈಲ ಬಳಕೆ ಅರ್ಧದಷ್ಟು ಕಡಿಮೆ ಮತ್ತು ನಮ್ಮ ಲೆಕ್ಕಾಚಾರದ ಪ್ರಕಾರ, ನಾವು ಒಂದು ವರ್ಷದಲ್ಲಿ ಸುಮಾರು 3,650 ಕೋಟಿ ರೂ. ಉಳಿಸಲು ಸಾಧ್ಯವಾಗುತ್ತದೆ. ಸೈನ್ಯದ ಎಲ್ಲಾ ನಿಯೋಜನಾ ಸ್ಥಳಗಳಲ್ಲಿ ಇದನ್ನು ನಿಯೋಜಿಸಲಾಗುವುದು” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.