ನವದೆಹಲಿ: ದೇಶದಾದ್ಯಂತ ಇಂದು ಕೋವಿಡ್-19 ಲಸಿಕೆಯ ಡ್ರೈ ರನ್ ಆರಂಭಗೊಂಡಿದೆ. ಲಸಿಕೆ ಅಭಿಯಾನವನ್ನು ಆರಂಭಿಸುವುದಕ್ಕೂ ಮುನ್ನ ನಡೆಸಲಾಗುವ ತಾಲೀಮು ಇದಾಗಿದೆ.
ದೇಶದ ನಾಗರಿಕರು ಲಸಿಕೆ ಪಡೆಯಲು ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ ಅದರ ಬೆಲೆಯ ಬಗ್ಗೆ ಸಹಜವಾದ ಕುತೂಹಲ ಎಲ್ಲರಿಗೂ ಮೂಡಿದೆ. ಕೇಂದ್ರ ಆರೋಗ್ಯ ಸಚಿವರು ಈ ಕುತೂಹಲಕ್ಕೆ ಅಂತ್ಯ ಹಾಡಿದ್ದಾರೆ.
ಕೋವಿಡ್ -19 ಲಸಿಕೆ ದೇಶಾದ್ಯಂತ ಉಚಿತವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಶನಿವಾರ ದೆಹಲಿಯಲ್ಲಿ ಲಸಿಕೆ ಡ್ರೈ ರನ್ ಸಿದ್ಧತೆಗಳನ್ನು ಪರಿಶೀಲಿಸುವಾಗ ಹೇಳಿದ್ದಾರೆ.
“ದೆಹಲಿಯಲ್ಲಿ ಮಾತ್ರವಲ್ಲ, ಲಸಿಕೆ ದೇಶಾದ್ಯಂತ ಉಚಿತವಾಗಿರುತ್ತದೆ” ಎಂದು ಡಾ.ಹರ್ಷವರ್ಧನ್ ಅವರು ಕೋವಿಡ್ -19 ಲಸಿಕೆಯನ್ನು ಉಚಿತವಾಗಿ ನೀಡುತ್ತಾರೆಯೇ ಎಂದು ಕೇಳಲಾದ ಪ್ರಶ್ನೆಯ ಸಂದರ್ಭದಲ್ಲಿ ಉತ್ತರಿಸಿದ್ದಾರೆ.
#WATCH | Not just in Delhi, it will be free across the country: Union Health Minister Dr Harsh Vardhan on being asked if COVID-19 vaccine will be provided free of cost pic.twitter.com/xuN7gmiF8S
— ANI (@ANI) January 2, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.