ದೇಶದಲ್ಲಿ ಸ್ಟಾರ್ಟ್-ಅಪ್ ಯುಗ ಆರಂಭವಾಗಿದೆ. ಯುವ ಜನತೆ ಒಂದಲ್ಲ ಒಂದು ರೀತಿಯ ನವೀನ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹೆಚ್ಚು ಹೆಚ್ಚು ಉತ್ಸಾಹ ತೋರಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಟಾರ್ಟ್-ಅಪ್ ಇಂಡಿಯಾ ಉಪಕ್ರಮ ಕೂಡ ಯುವಕರಿಗೆ ಉತ್ತೇಜನ ನೀಡುತ್ತಿದೆ, ಪೂರಕ ವಾತಾವರಣವನ್ನು ಕಲ್ಪಿಸಿಕೊಡುತ್ತಿದೆ.
ಹೈದರಾಬಾದ್ ಮೂಲದ RACEnergy ಎಂಬ ಎಲೆಕ್ಟ್ರಿಕಲ್ ವೆಹ್ಹಿಕಲ್ ಸ್ಟಾರ್ಟ್-ಅಪ್ ಉತ್ಸಾಹಿ ಯುವಕರಿಂದ ಪ್ರಾರಂಭವಾದ ಸ್ಟಾರ್ಟ್-ಅಪ್ ಆಗಿದ್ದು, ಆಟೋ-ರಿಕ್ಷಾಗಳನ್ನು ಎಲೆಕ್ಟ್ರಿಕ್ ವೆಹ್ಹಿಕಲ್ ಆಗಿ ಪರಿವರ್ತಿಸಲು ಇದು ಕಿಟ್ಗಳನ್ನು ತಯಾರಿಸುತ್ತಿದೆ.
RACEnergyಗೆ ಈ ಕಿಟ್ ಅನ್ನು ಅಭಿವೃದ್ಧಿಪಡಿಸಲು, ಪರೀಕ್ಷೆಗೊಳಪಡಿಸಲು ಬರೋಬ್ಬರಿ ಎರಡು ವರ್ಷಗಳು ಬೇಕಾಗಿವೆ. ಇದನ್ನು ಈಗಿರುವ ಐಸಿ ಎಂಜಿನ್ ಚಾಲಿತ ತ್ರಿಚಕ್ರ ವಾಹನಕ್ಕೆ ಮರುಹೊಂದಿಸಬಹುದು. ಹೈದರಾಬಾದ್ನಲ್ಲಿ 2,000 ಕ್ಕೂ ಹೆಚ್ಚು ಆಟೋರಿಕ್ಷಾ ಡ್ರೈವರ್ಗಳೊಂದಿಗೆ ಮಾತನಾಡಿದ್ದ ಸ್ಟಾರ್ಟ್-ಅಪ್, ಇದೀಗ ಚಾಲಕರು ಮತ್ತು ಪ್ರಯಾಣಿಕರ ಜೀವನವನ್ನು ಸುಧಾರಿಸುವಂತಹ ಉತ್ಪನ್ನವನ್ನು ತಲುಪಿಸುವ ಹಂತದಲ್ಲಿದೆ.
ಆಟೋವನ್ನು ಎಲೆಕ್ಟ್ರಿಕ್ ವಾಹನ ಮಾಡಬಲ್ಲ ಈ ಕಿಟ್ ಬೆಲೆ ಸುಮಾರು 50,000 ರೂಪಾಯಿ. ಇದು ಅಗ್ಗವಾಗಿದೆ, ಏಕೆಂದರೆ ಇದನ್ನು ಬ್ಯಾಟರಿ ವಿನಿಮಯ ಮಾದರಿಯಲ್ಲಿ ನಿರ್ವಹಿಸಲಾಗುತ್ತದೆ, ಹೀಗಾಗಿ ವಾಹನದ ಬೆಲೆಯಿಂದ ಬ್ಯಾಟರಿ ಬೆಲೆ ಹೊರಗಿರುತ್ತದೆ. ತನ್ನ ವಾಹನವನ್ನು ಇವಿಯಾಗಿ ಪರಿವರ್ತಿಸುವ ಚಾಲಕ ಬ್ಯಾಟರಿಯನ್ನು ಮುಂಗಡವಾಗಿ ಖರೀದಿಸುವುದಿಲ್ಲ ಮತ್ತು ಅಗತ್ಯವಿದ್ದಾಗ ಅದನ್ನು ಬ್ಯಾಟರಿ ವಿನಿಮಯ ಕೇಂದ್ರದಲ್ಲಿ ವಿನಿಮಯ ಮಾಡಿಕೊಳ್ಳುತ್ತಾನೆ. ತಾನು ಬಳಸಿದ ಬ್ಯಾಟರಿ ಶಕ್ತಿಯ ಮೊತ್ತವನ್ನು ಮಾತ್ರ ಪಾವತಿಸುತ್ತಾನೆ. ವಿಶಿಷ್ಟವಾಗಿ, ಐಸಿಇ ಆಟೋರಿಕ್ಷಾ ಸುಮಾರು 2 ರಿಂದ 2.5 ಲಕ್ಷ ರೂ. ಬೆಲೆ ಹೊಂದಿದೆ ಮತ್ತು ಅದನ್ನು ಪರಿವರ್ತಿಸಲು ಕೇವಲ ಐದನೇ ಒಂದು ಭಾಗದಷ್ಟು ಬೆಲೆ ತಗಲುತ್ತದೆ. ಈ ನಡುವೆ, ಮಾರುಕಟ್ಟೆಯಲ್ಲಿ ಇ-ಆಟೋಗೆ ಸುಮಾರು 3.5 ಲಕ್ಷ ರೂ.ಇದೆ. ಬ್ಯಾಟರಿ ವಿನಿಮಯ ಮಾಡುವ ಮೂಲಕ ತನ್ನ ಆಟೋವನ್ನು ಎಲೆಕ್ಟ್ರಿಕ್ ಆಗಿ ಬದಲಾಯಿಸುವ ಚಾಲಕರು ಸುಮಾರು 12-15 ತಿಂಗಳುಗಳಲ್ಲಿ ಕಿಟ್ ಖರೀದಿ ವೆಚ್ಚವನ್ನು ಮರುಪಡೆಯುತ್ತಾರೆ.
ಸ್ಟಾರ್ಟ್ಅಪ್ ಹೈದರಾಬಾದಿನಲ್ಲಿ ಒಂದು ಬ್ಯಾಟರಿ ವಿನಿಮಯ ಕೇಂದ್ರವನ್ನು ಸ್ಥಾಪಿಸಿದೆ. ಮುಂದಿನ ಎರಡು ಅಥವಾ ಮೂರು ತಿಂಗಳಲ್ಲಿ ಅಂತಹ ಐದು ಕೇಂದ್ರಗಳು ಬರಲಿವೆ. ಕಳೆದ ಎರಡು ತಿಂಗಳುಗಳಲ್ಲಿ ಈ ಎಲೆಕ್ಟ್ರಿಕ್ ಕಿಟ್ಗಳ ಖರೀದಿ ಅಂತಿಮಗೊಂಡ ನಂತರ, ಸ್ಟಾರ್ಟ್-ಅಪ್ 300 ಕ್ಕೂ ಹೆಚ್ಚು ಪೂರ್ವ-ಆದೇಶಗಳನ್ನು ಸ್ವೀಕರಿಸಿದೆ. ಇಲ್ಲಿಯವರೆಗೆ, ಅದು 10 ವಾಹನಗಳನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಿದ್ದಾರೆ. ಮುಂದಿನ ಕೆಲವು ತಿಂಗಳುಗಳನ್ನು ಪೂರ್ವ-ಆದೇಶಗಳನ್ನು ಪೂರೈಸಲು ಖರ್ಚು ಮಾಡಲಾಗುತ್ತದೆ.
“ಬ್ಯಾಟರಿ ವಿನಿಮಯ ಮಾದರಿಯಲ್ಲಿ, ಬ್ಯಾಟರಿ ವಿನಿಮಯ ಮಾಡಿಕೊಳ್ಳುವ ಕಂಪನಿಯ ಒಡೆತನದಲ್ಲಿರುತ್ತದೆ. ಆದರೆ ವಾಹನ ಮತ್ತು ರೆಟ್ರೊಫಿಟ್ ಕಿಟ್ ಚಾಲಕನ ಒಡೆತನದಲ್ಲಿರುತ್ತದೆ. ಅವರು ನಮ್ಮ ಬ್ಯಾಟರಿಗಳನ್ನು ಸೇವೆಯಾಗಿ ಬಳಸುತ್ತಾರೆ. ಬ್ಯಾಟರಿಗಳನ್ನು ನಿರ್ವಹಿಸುವ ಬಗ್ಗೆ ವಾಹನ ಮಾಲೀಕರು ಚಿಂತಿಸಬೇಕಾಗಿಲ್ಲ. ಡ್ರೈವರ್ಗಳಿಗೆ, ಯಾವುದೇ ಕ್ಲಚ್ ಅಥವಾ ಗೇರ್ಬಾಕ್ಸ್ ಇಲ್ಲದಿರುವುದರಿಂದ, ಅವರು ಹೆಚ್ಚಿನ ಆರಾಮದಲ್ಲಿ ಹೆಚ್ಚಿನ ದೂರವನ್ನು ಕ್ರಮಿಸಬಹುದು ಮತ್ತು ಅವರು ಮೊದಲಿಗಿಂತ ಹೆಚ್ಚಿನ ಸವಾರಿಗಳನ್ನು ಮಾಡಬಹುದು” ಎಂದು ಸ್ಟಾರ್ಟ್-ಅಪ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.