
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್ (ಜಿಎಚ್ಟಿಸಿ) -ಇಂಡಿಯಾವನ್ನು ಜನವರಿ 1 ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಾರಂಭಿಸಲಿದ್ದಾರೆ. ನಿಗದಿತ ಸಮಯದ ಚೌಕಟ್ಟಿನೊಳಗೆ ಕೈಗೆಟುಕುವ ದರದ ಮನೆಗಳನ್ನು ನಿರ್ಮಿಸುವ ತಂತ್ರಜ್ಞಾನಗಳನ್ನು ಒದಗಿಸಲಿದೆ.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್- ಇಂಡಿಯಾ (ಜಿಎಚ್ಟಿಸಿ-ಇಂಡಿಯಾ)ವನ್ನು ಪ್ರಾರಂಭಿಸಿತು, ಇದು ಸುಸ್ಥಿರ, ಪರಿಸರ ಸ್ನೇಹಿ ಮತ್ತು ವಿಪತ್ತು ಎದುರಿಸಲು ಶಕ್ತವಾಗಿರುವ ವಸತಿಗಳ ನಿರ್ಮಾಣ ಕ್ಷೇತ್ರಕ್ಕಾಗಿ ಜಗತ್ತಿನಾದ್ಯಂತದ ನವೀನ ನಿರ್ಮಾಣ ತಂತ್ರಜ್ಞಾನಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಇದನ್ನು ಆರಂಭಿಸಲಾಗುತ್ತಿದೆ.
ಜಿಎಚ್ಟಿಸಿ-ಇಂಡಿಯಾ ಭಾಗವಾಗಿ, ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯ ಸೌಲಭ್ಯಗಳನ್ನು ಹೊಂದಿರುವ ತಲಾ ಸುಮಾರು 1,000 ಮನೆಗಳನ್ನು ಒಳಗೊಂಡಿರುವ ಆರು ಲೈಟ್ ಹೌಸ್ ಯೋಜನೆಗಳನ್ನು (ಎಲ್ಎಚ್ಪಿ) ದೇಶದ ಆರು ನಗರಗಳಲ್ಲಿ ಇಂದೋರ್, ರಾಜ್ಕೋಟ್, ಚೆನ್ನೈ, ರಾಂಚಿ, ಅಗರ್ತಲಾ ಮತ್ತು ಲಕ್ನೋದಲ್ಲಿ ನಿರ್ಮಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


