
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬಜೆಟ್ ಪೂರ್ವ ಸಮಾಲೋಚನಾ ಸಭೆ ನಡೆಸಿದರು. ಬಿಜೆಪಿ ಪಕ್ಷದ ಕೇಂದ್ರ ಕಛೇರಿಯಲ್ಲಿ ನಡೆದ ಈ ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ರಾಜ್ಯ ಪ್ರತಿನಿಧಿಗಳು ಸಂಗ್ರಹಿಸಿದ ಸಲಹೆಯನ್ನು ಮಂಡಿಸಲಾಯಿತು.
ಇದಲ್ಲದೆ, ವಿವಿಧ ಸಾಮಾಜಿಕ ಸಂಸ್ಥೆಗಳ ಪ್ರತಿನಿಧಿಗಳು ಸಂಗ್ರಹಿಸಿದ ಸಲಹೆಗಳನ್ನು ಪವರ್ ಪಾಯಿಂಟ್ ಮೂಲಕ ಪ್ರಸ್ತುತಪಡಿಸಲಾಯಿತು ಮತ್ತು ಲಿಖಿತ ಅಭಿಪ್ರಾಯಗಳನ್ನು ಕೂಡ ಇಲ್ಲಿ ಮಂಡಿಸಲಾಯಿತು. ಸಭೆಯಲ್ಲಿ ಸಮಾಜದ ವಿವಿಧ ವಿಭಾಗದ 17 ಪ್ರತಿನಿಧಿಗಳು ಭಾಗವಹಿಸಿದ್ದರು.
ರೈತರ ಕಾಳಜಿ, ಕಾರ್ಮಿಕ ನಿರೀಕ್ಷೆಗಳು ಮತ್ತು ಮಧ್ಯಮ ಆದಾಯ ಗುಂಪಿನ ಕಾಳಜಿಗಳನ್ನು ಒಳಗೊಂಡಂತೆ ವ್ಯಾಪಾರ ಮತ್ತು ಉದ್ಯಮದ ಆಶಯಗಳ ಬಗ್ಗೆ ಸಭೆಯಲ್ಲಿ ವ್ಯಾಪಕವಾಗಿ ಚರ್ಚಿಸಲಾಯಿತು.
ಸರ್ಕಾರಕ್ಕಾಗಿ ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ವ್ಯಾಪಾರಿಗಳು, ಕೈಗಾರಿಕೋದ್ಯಮಿ ಮತ್ತು ಸಾಮಾನ್ಯ ಜನರಿಗಾಗಿ ತೆರಿಗೆ ಮತ್ತು ಜಿಎಸ್ಟಿ ಅನುಷ್ಠಾನವನ್ನು ಹೇಗೆ ಸರಾಗಗೊಳಿಸಬಹುದು ಎಂಬ ಬಗ್ಗೆಯೂ ಚರ್ಚಿಸಲಾಯಿತು.
ಸಚಿವೆ ಪವರ್ ಪಾಯಿಂಟ್ ಪ್ರಸ್ತುತಿ ಮತ್ತು ಇತರ ಸಲಹೆಗಳನ್ನು ಸುಮಾರು 3 ಗಂಟೆಗಳ ಕಾಲ ಪರಿಶೀಲಿಸಿದರು. ಬಜೆಟ್ ಪೂರ್ವದ ಈ ಚರ್ಚೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್ ಬಿ ಎಲ್ ಸಂತೋಷ್ , ಪಕ್ಷದ ಪ್ರಧಾನ ಕಾರ್ಯದರ್ಶಿ ಎಸ್ ಅರುಣ್ ಸಿಂಗ್ ಮತ್ತು ರಾಷ್ಟ್ರೀಯ ವಕ್ತಾರ ಗೋಪಾಲ್ ಕೃಷ್ಣ ಅಗರ್ವಾಲ್ ಉಪಸ್ಥಿತರಿದ್ದರು.
FM Smt @nsitharaman presided over a pre-Budget consultation meeting at party headquarters yesterday. Suggestions compiled by Party’s office bearers, State representatives and various social organizations were presented to her.
More details at https://t.co/9fcLicUlq1 pic.twitter.com/iJM0l7PWsO
— BJP (@BJP4India) December 29, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


