ನವದೆಹಲಿ: ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರದ ನಿರ್ಮಾಣಕ್ಕೆ ಸುಮಾರು 1,100 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ, ಅದರಲ್ಲಿ ಸುಮಾರು 300-400 ಕೋಟಿ ರೂ. ಮುಖ್ಯ ದೇವಾಲಯದ ರಚನೆಯನ್ನು ನಿರ್ಮಿಸಲು ವೆಚ್ಚವಾಗಲಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ವಿವರಗಳನ್ನು ಹಂಚಿಕೊಂಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿಜಿ ಮಹಾರಾಜ್ ಅವರು, “ರಚನಾ ತಜ್ಞರು ಮತ್ತು ಎಂಜಿನಿಯರ್ಗಳು ದೇವಾಲಯದ ಅಡಿಪಾಯಕ್ಕಾಗಿ ಯೋಜನೆಯನ್ನು ರೂಪಿಸುತ್ತಿದ್ದಾರೆ ಮತ್ತು ಸಂಪೂರ್ಣ ನಿರ್ಮಾಣವು ಮೂರುವರೆ ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ” ಎಂದಿದ್ದಾರೆ.
ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ಗೆ ಈವರೆಗೆ ಆನ್ಲೈನ್ ದೇಣಿಗೆ ಮೂಲಕ ಸುಮಾರು 100 ಕೋಟಿ ರೂ.ಸಂಗ್ರಹಿಸಿದೆ. ಭವ್ಯ ದೇವಾಲಯಕ್ಕೆ ಹಣ ಸಂಗ್ರಹಿಸುವ ಉಪಕ್ರಮದಲ್ಲಿ ಭಕ್ತರ ಗರಿಷ್ಠ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ನಾಲ್ಕು ಲಕ್ಷ ಗ್ರಾಮಗಳು ಮತ್ತು 11 ಕೋಟಿ ಕುಟುಂಬಗಳನ್ನು ತಲುಪಲು ಟ್ರಸ್ಟ್ ಯೋಜಿಸಿದೆ.
ಟ್ರಸ್ಟ್ ಈಗಾಗಲೇ ಸಾಮೂಹಿಕ ಸಂಪರ್ಕ ಮತ್ತು ನಿಧಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಿದೆ.
ರೂರ್ಕಿ ಮೂಲದ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ ಮತ್ತು ಮುಂಬೈ, ದೆಹಲಿ, ಮದ್ರಾಸ್ ಮತ್ತು ಗುವಾಹಟಿಯ ಐಐಟಿಗಳ ತಜ್ಞರು ಲಾರ್ಸೆನ್ ಮತ್ತು ಟೌಬ್ರೊ (ಎಲ್ & ಟಿ) ಮತ್ತು ಟಾಟಾ ಗ್ರೂಪ್ನ ವಿಶೇಷ ಎಂಜಿನಿಯರ್ಗಳೊಂದಿಗೆ ದೇಗುಲ ನಿರ್ಮಾಣ ಕಾರ್ಯದಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.