ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಮೆಟ್ರೊದ ಮೆಜೆಂತಾ ಲೈನ್ನಲ್ಲಿ ಭಾರತದ ಮೊಟ್ಟಮೊದಲ ಚಾಲಕರಹಿತ ರೈಲು ಕಾರ್ಯಾಚರಣೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಾಳೆ ಉದ್ಘಾಟಿಸಲಿದ್ದಾರೆ.
ಈ ಆವಿಷ್ಕಾರಗಳು ಪ್ರಯಾಣದ ಸೌಕರ್ಯ ಮತ್ತು ಚಲನಶೀಲತೆಯ ವರ್ಧನೆಯಲ್ಲಿ ಹೊಸ ಯುಗವನ್ನು ಪ್ರತಿಬಿಂಬಿಸುತ್ತದೆ. ಚಾಲಕರಹಿತ ರೈಲುಗಳು ಸಂಪೂರ್ಣ ಸ್ವಯಂಚಾಲಿತವಾಗಿರುತ್ತವೆ, ಇದು ಮಾನವನಿಂದ ಆಗುವ ತಪ್ಪುಗಳನ್ನು ತೊಡೆದು ಹಾಕುತ್ತದೆ.
ಜನಕ್ಪುರಿ ಪಶ್ಚಿಮದಿಂದ ಬೊಟಾನಿಕಲ್ ಗಾರ್ಡನ್ ನಡುವಿನ ಮೆಜೆಂತಾ ಮಾರ್ಗದಲ್ಲಿ ಚಾಲಕರಹಿತ ಸೇವೆಗಳು ಪ್ರಾರಂಭವಾದ ನಂತರ, ದೆಹಲಿ ಮೆಟ್ರೋದ ಪಿಂಕ್ ಲೈನ್ 2021 ರ ಮಧ್ಯಭಾಗದಲ್ಲಿ ಚಾಲಕರಹಿತ ಕಾರ್ಯಾಚರಣೆಯನ್ನು ನಡೆಸುವ ನಿರೀಕ್ಷೆಯಿದೆ.
ವಿಮಾನ ನಿಲ್ದಾಣ ಎಕ್ಸ್ಪ್ರೆಸ್ ಮಾರ್ಗದಲ್ಲಿ ಸಂಪೂರ್ಣ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಸೇವೆಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಇದು ದೇಶದ ಯಾವುದೇ ಭಾಗದಿಂದ ನೀಡಲಾಗುವ ರುಪೇ – ಡೆಬಿಟ್ ಕಾರ್ಡ್ ಹೊಂದಿರುವ ಯಾರಾದರೂ ಆ ಕಾರ್ಡ್ ಬಳಸಿ ವಿಮಾನ ನಿಲ್ದಾಣ ಎಕ್ಸ್ಪ್ರೆಸ್ ಮಾರ್ಗದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಈ ಸೌಲಭ್ಯವು 2022 ರ ವೇಳೆಗೆ ಇಡೀ ದೆಹಲಿ ಮೆಟ್ರೋ ನೆಟ್ವರ್ಕ್ನಲ್ಲಿ ಲಭ್ಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.